ತಲಾಖ್‌ಗಿಲ್ಲ ಬ್ರೇಕ್- ಚಿತ್ರಹಿಂಸೆಗೆ ಸಂತ್ರಸ್ತೆ ಬಲಿ!

ಬರೇಲಿ, ಜು ೧೧- ದೇಶದಲ್ಲಿ ತ್ರಿವಳಿ ತಲಾಖ್ ರದ್ದು ಮಾಡಲಾಗಿದ್ದರೂ, ದೇಶದೆಲ್ಲೆಡೆ ತಲಾಕ್ ಹಾವಳಿ ನಿಂತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೌದು ಸತತ ಒಂದು ತಿಂಗಳ ಕಾಲ ಅನ್ನ-ನೀರು ಕೊಡದೆ ನೀಡಿದ ಚಿತ್ರಹಿಂಸೆಯಿಂದ ತಲಾಖ್ ಸಂತ್ರಸ್ತೆಯೊಬ್ಬಳು ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ರಜಿಯಾ ಎಂಬಾಕೆ ಮೃತಪಟ್ಟ ದುರ್ದೈವಿ. ರಜೀಯಾ, ನಹೀಂ ಎಂಬಾತನನ್ನು ಮದುವೆಯಾಗಿದ್ದಳು. ಈ ದಂಪತಿಗೆ ಆರು ವರ್ಷದ ಮಗು ಕೂಡ ಇದ್ದು, ರಜಿಯಾಗೆ ನಹೀಂ ಫೋನ್ ಮೂಲಕ ತಲಾಖ್ ಹೇಳಿದ್ದ. ಇಷ್ಟೇ ಅಲ್ಲದೇ, ತಲಾಖ್ ಕೊಟ್ಟ ಒಂದು ತಿಂಗಳ ಬಳಿಕವೂ ತನ್ನ ಮನೆಯಲ್ಲೇ ಆಕೆಯನ್ನು ಕೂಡಿ ಹಾಕಿ ಅನ್ನ-ನೀರು ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ.

ಈ ವಿಷಯ ತಿಳಿದ ರಜಿಯಾ ಕುಟುಂಬಸ್ಥರು ಪೊಲೀಸರ ಸಹಾಯದಿಂದ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರಜಿಯಾ ಮೃತಪಟ್ಟಿದ್ದಾಳೆ ಎಂದು ಆಕೆಯ ಸಹೋದರಿ ತಿಳಿಸಿದ್ದಾಳೆ.

ಇತ್ತ, ನಹೀಂಗೆ ರಜಿಯಾಗೂ ಮೊದಲೇ ಮತ್ತೊಂದು ಮದುವೆಯಾಗಿತ್ತು. ಆಕೆಗೂ ಇದೇ ರೀತಿ ಚಿತ್ರಹಿಂಸೆ ನೀಡಿದ್ದ ಎಂದು ಎನ್?ಜಿಒವೊಂದರ ರಹಾತ್? ನಖ್ವಿ ಹೇಳಿದ್ದು, ರಜಿಯಾಳನ್ನು ಮೊದಲು ಬರೇಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಲಕ್ನೋಗೆ ರವಾನಿಸಲಾಗಿತ್ತು. ಅಲ್ಲಿ ರಜಿಯಾ ಮೃತಪಟ್ಟಿದ್ದಾಳೆಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

Leave a Comment