ತರಬೇತಿ ನೀಡಿದ್ದು ನನಗೆ ತೃಪ್ತಿ ತಂದಿದೆ: ಪಾಟೀಲ

ಕುಂದಗೋಳ ಸೆ12:   ಒಂದು ಭಾಷೆಯ ಬರವಣಿಗೆಯಲ್ಲಿ ಸಾಕಷ್ಟು ಪದ್ಧತಿ ರೀತಿ-ನೀತಿಗಳಿದ್ದಂತೆ ಇಂಗ್ಲೀಷ ಭಾಷೆಯಲ್ಲೂ ಬರವಣಿಗೆ ಪದ್ಧತಿ ಇದ್ದು, ಇಂಗ್ಲೀಷ ಆರೋಗ್ಯ ಬರಹ-ಆರೋಗ್ಯ ಜೀವನ ಕುರಿತು 8 ದಿನಗಳ ಕಾಲ ತರಬೇತಿ ನೀಡಿದ್ದು ನನಗೆ ತೃಪ್ತಿ ತಂದಿದ್ದಲ್ಲದೆ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳು ಚನ್ನಾಗಿ ಬರೆಯಲು ಕಲಿತಿದ್ದಾರೆ ಎಂದು ತರಬೇತಿದಾರ ಎಫ್.ಎಸ್.ಪಾಟೀಲ ಹೇಳಿದರು.
ಅವರು ಪಟ್ಟಣದ ಸರ್ವೋದಯ ಶಾಲೆಯಲ್ಲಿ ಮಂಗಳವಾರ  ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಗೆ ಇಂಗ್ಲೀಷ ಬರೆಯುವ ಪದ್ಧತಿಯ ತರಬೇತಿ ಶಿಬಿರದ ಸಮಾರೂಪದಲ್ಲಿ ಮಾತನಾಡುತ್ತ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಾಲ್ಯದಲ್ಲಿಯೇ ಮಕ್ಕಳಿಗೆ ಇಂಗ್ಲೀಷ ಬರೆಯುವ ರೀತಿ-ನೀತಿಗಳು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಂಡು ಕಲಿತಿರುವದು ನನಗೆ ಸಂಸತ ತಂದಿದ್ದು, ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ಬಂದಿದ್ದು, ಮಕ್ಕಳಿಗೆ ಇಂಗ್ಲೀಷ ಭಾಷೆ ಕಬ್ಬಿಣದ ಗಡಲೆಯೇಲ್ಲ. ಬರೆಯಲು ಹಾಗೂ ಓದುವ ಮಾರ್ಗೋಪಾಯಗಳನ್ನು ಕಲಿಸುವದೇ ನನ್ನ ಮುಖ್ಯ ಗುರಿ ಎಂದು ಹೇಳಿದರು.
ಶಾಲಾ ಅಧ್ಯಕ್ಷ ಎನ್.ಸಿ.ಧಾರವಾಡ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ನೀಲಾ ಪಾಟೀಲ, ಶಾಲಾ ಮುಖ್ಯೋಪಾದ್ಯಾಯಿನಿ ಜ್ಯೋತಿ ಸರಕಾಳೆ ಇದ್ದರು. ಆರ್.ಎಸ್.ಬೆಳವಲಕೊಪ್ಪ ನಿರೂಪಿಸಿದರು, ಆರ್.ಎಸ್.ತಾಯ್ತಂದೆ ಪ್ರಾರ್ಥಿಸಿದರು, ಕೆ.ಎಸ್.ಧಾರವಾಡ ಸ್ವಾಗತಿಸಿದರು. ಎಸ್.ಸಿ.ಹೊಳಗಣ್ಣವರ ವಂದಿಸಿದರು.

Leave a Comment