ತರಬೇತಿ,ಉದ್ಯೋಗ ಆಯ್ಕೆ ಶಿಬಿರ 23 ರಿಂದ

 

ಕಲಬುರಗಿ ಜ 21:ಅಫಜಲಪುರ ತಾಲೂಕಿನ 18ರಿಂದ 35 ವರ್ಷದ ಒಳಗಿನ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರದ ಉದ್ಘಾಟನೆ ಜ. 23 ರಂದು ಬೆಳಿಗ್ಗೆ 11 ಗಂಟೆಗೆ ಅಫಜಲಪುರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.ಅಫಜಲಪುರ ಶಾಸಕ ಎಂ.ವೈ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು ಎಂದು ಅಫಜಲಪುರ ತಾಪಂ ಎಂಆರ್‍ಡಬ್ಲ್ಯೂ ಬಸವರಾಜ ಹಡಪದ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಎಪಿಡಿ ಸಂಸ್ಥೆ,ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಮತ್ತು ನಗರಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ .

.ವಿಕಲಚೇತನರು ಮಾಹಿತಿಗಾಗಿ ಎಪಿಡಿ ಸಂಸ್ಥೆ ( 9743098925) ಯನ್ನು ಸಂಪರ್ಕಿಸಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ಶಿವಯೋಗೆಪ್ಪ,ಪ್ರಕಾಶ ಕಂಬಾರ,ಲಕ್ಷ್ಮಣ ಭೋಸ್ಲೆ ಸೇರಿದಂತೆ ಹಲವರಿದ್ದರು.

Leave a Comment