ತರಕಾರಿ ಮಾರುಕಟ್ಟೆಗೆ ಮೂಲಭೂತ ಸೌಕರ್ಯಕ್ಕೆ ಆಗ್ರಹ

ರಾಯಚೂರು.ಆ.09- ನಗರದ ಬಿಎಸ್‌ಎನ್‌ಎಲ್‌ ಕಛೇರಿ ಮುಂದುಗಡೆ ಹೊಸದಾಗಿ ನಿರ್ಮಿಸಲ್ಪಟ್ಟಿರುವ ತರಕಾರಿ ಮಾರುಕಟ್ಟೆಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆ ಮಳಿಗೆಗಳಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಶೌಚಾಲಯ, ವಿದ್ಯುತ್ ಹಾಗೂ ಕ್ಯಾಂಟಿನ್ ಅಳವಡಿಸಬೇಕು. ರೈತರು ಮಾರಾಟ ಮಾಡಲು ತರುವ ಸರಕುಗಳನ್ನು ಇರಿಸಲು ಹವಾ ನಿಯಂತ್ರಣಾ ಕೋಣೆ ನಿರ್ಮಿಸಬೇಕು, ಸುಸಜ್ಜಿತ ಮಳಿಗೆ ನಿರ್ಮಿಸಬೇಕು, ನಗರದ ಉಸ್ಮಾನೀಯ ಮಾರುಕಟ್ಟೆ ಹಿಂಭಾಗದಲ್ಲಿ ರೈತರು ಕುಳಿತು ತರಕಾರಿ ಮಾರಾಟ ಮಾಡಲು ನಿರ್ಮಿಸಲಾದ ಕಟ್ಟೆಯ ಮೇಲೆ ಟಿನ್‌ಶೆಡ್ ಹಾಕಬೇಕು, ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪ ಸ್ವಾಮಿ, ಕೆ.ವೀರೇಶ್ ಗೌಡ, ಶ್ರೀಕಾಂತ ಗೌಡ, ಹುಲಿಗೆಪ್ಪ ಜಾಲಿಬೆಂಚಿ, ದೇವರಾಜ ನಾಯಕ, ರಮೇಶ್, ತಿಮ್ಮಪ್ಪ, ಚಾಂದಸಾಬ್, ಚೆನ್ನಾರೆಡ್ಡಿ, ನಾಗರಾಜ್, ತಾಯಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment