ತರಕಾರಿ ಖರೀದಿಗೆ ಬಂದರೆ ರಸಾಯನಿಕ ಸಿಂಪರಣೆ

ಬಳ್ಳಾರಿ, ಏ.7: ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬರುವವರಿಗೆ ಇಂದಿನಿಂದ ಕೊರೋನಾ ಸೋಂಕು ಹರಡದಂತೆ ತಡೆಯುವ ಕ್ರಮಗಳಲ್ಲಿ ಒಂದಾದ ಸುರಂಗಮಾರ್ಗದ ರಸ್ತೆಯಲ್ಲಿ ಬರುವವರಿಗೆ ರಸಾಯನಿಕ ಸಿಂಪರಣೆ ಕಾರ್ಯ ನಡೆದಿದೆ.

ಸೋಂಕು ಹರಡುವುದನ್ನು ತಡೆಗಟ್ಟೋ ನಿಟ್ಟಿನಲ್ಲಿ ಪಾಲಿಕೆಯಿಂದ ವಿಶೇಷವಾಗಿ ಇದನ್ನು ನಿರ್ಮಿಸಲಾಗಿದೆ. ಆದರೆ ಜನ ಮಾತ್ರ ಮೈದಾನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ನಿತ್ಯದಂತೆ ಮಾರುಕಟ್ಟೆಯಲ್ಲಿ ಒಬ್ಬರಿಗೊಬ್ಬರು ತಾಕಿಕೊಂಡೇ ಖರೀದಿ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಪಾಲಿಕೆ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಮಾತಿಗೆ ಕ್ಯಾರೆ ಅನ್ನುತ್ತಿಲ್ಲ ವ್ಯಾಪಾರಿಗಳು ಮತ್ತು ಜನ.
ಜನರಲ್ಲೂ ಯಾವುದೇ ಬದಲಾವಣೆ ಇಲ್ಲ. ನಗರದ ಏಂಟು ಕಡೆ ಮಾರುಕಟ್ಟೆ ನಿರ್ಮಾಣ ಮಾಡಿದ್ದರೂ ಜನಜಂಗುಳಿ ಮಾತ್ರ ತಪ್ಪಿಲ್ಲ.

Leave a Comment