ತಮಿಳ್ನಾಡಿನ ಮೀನುಗಾರ ನಾಪತ್ತೆ

ಮಂಗಳೂರು, ಫೆ.೨೫- ಮೂಲತಃ ತಮಿಳ್ನಾಡಿನ ಮೀನುಗಾರನೊಬ್ಬ ಮಂಗಳೂರಿನಲ್ಲಿ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳ್ನಾಡಿನ ರಾಮನಾಥಪುರಂ ಜಿಲ್ಲೆಯ ಅಲಂಗನ ಕುಳಂ ನಿವಾಸಿ ನಾಗಮುತ್ತು(೫೪) ನಾಪತ್ತೆಯಾದವರು. ಕಳೆದ ೧೦ ವರ್ಷದಿಂದ ಮಂಗಳೂರಿನಲ್ಲಿ ಧಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಆರು ತಿಂಗಳ ಹಿಂದೆ ಊರಿಗೆ ಹೋಗಿದ್ದ ಇವರು ಮರಳಿ ಬಂದಿಲ್ಲ ಎನ್ನಲಾಗಿದೆ. ಹಾಗಾಗಿ ಬೇರೆ ಬೇರೆ ಕಡೆ ಹುಡುಕಿದರೂ ಪ್ರಯೋಜನವಾಗಿಲ್ಲ. ೫ ಅಡಿ ಎತ್ತರದ ಸಪೂರ ಶರೀರದ, ಕಪ್ಪು ಮೈಬಣ್ಣ ಹೊಂದಿದ ಇವರು ೮ನೆ ತರಗತಿ ಕಲಿತಿದ್ದು, ತಮಿಳು ಭಾಷೆ ಮಾತನಾಡುತ್ತಾರೆ. ಇವರನ್ನು ಕಂಡಲ್ಲಿ ದೂ.ಸಂ: ೦೮೨೪-೨೨೨೦೫೧೮ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Leave a Comment