ತಮಿಳುನಾಡಿನಿಂದ ವೈಕೊ, ಇತರ 5 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ಚೆನ್ನೈ, ಜುಲೈ 11 – ಪ್ರತಿಪಕ್ಷ ಡಿಎಂಕೆ ಅಭ್ಯರ್ಥಿಎನ್ ಆರ್ ಎಳಂಗೊ ನಿನ್ನೆ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡು, ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ನಾಮಪತ್ರ ಅಂಗೀಕಾರವಾದ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಜುಲೈ 18 ರಂದು ನಿಗದಿಯಾಗಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿತ್ತು.

ಆಡಳಿತಾರೂಢ ಎಐಎಡಿಎಂಕೆಯಿಂದ ತಲಾ ಇಬ್ಬರು, ಪ್ರತಿಪಕ್ಷಗಳಾದ ಡಿಎಂಕೆ, ಪಿಎಂಕೆ ಮತ್ತು ಎಂಡಿಎಂಕೆ ತಲಾ ಒಬ್ಬರು ಸೇರಿದಂತೆ ಕಣದಲ್ಲಿದ್ದ ಎಲ್ಲ ಆರು ಅಭ್ಯರ್ಥಿಗಳು ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಎಂದು ಘೋಷಿಸಿದ್ದಾರೆ.

ಮಾಜಿ ಸಚಿವ ಎ ಮೊಹಮ್ಮದ್ ಜಾನ್,ಎನ್ ಚಂದ್ರಶೇಖರನ್ (ಎಐಎಡಿಎಂಕೆ), ಎಲ್‌ಪಿಎಫ್‌ ಪ್ರಧಾನ ಕಾರ್ಯದರ್ಶಿ ಎಂ.ಶಣ್ಮುಗಮ್ ಮತ್ತು ವಕೀಲ ಪಿ ವಿಲ್ಸನ್ (ಇಬ್ಬರೂ ಡಿಎಂಕೆ ) ಮತ್ತು ಮಾಜಿ ಕೇಂದ್ರ ಸಚಿವ ಪಿಎಂಕೆಯ ಅನ್ಬುಮಣಿ ರಾಮದಾಸ್ (ಎಐಎಡಿಎಂಕೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿತ್ತು ) ಹಾಗೂ ವೈಕೊ ಆಯ್ಕೆಯಾದವರಾಗಿದ್ದಾರೆ.

ಶ್ರೀನಿವಾಸನ್ ಅವರು ಚುನಾವಣಾ ಪ್ರಮಾಣಪತ್ರಗಳನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ  ಹಸ್ತಾಂತರಿಸಿದರು.  ನಂತರ, ಆಯ್ಕೆಯಾದ ಇಬ್ಬರು ಎಐಎಡಿಎಂಕೆ ಅಭ್ಯರ್ಥಿಗಳು ಮತ್ತು ಡಾ.ರಾಮದಾಸ್‌ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಅವರ ಕೊಠಡಿಯಲ್ಲಿ  ಭೇಟಿಯಾಗಿ ಆಶೀರ್ವಾದ ಪಡೆದರು.

ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವೈಕೋ ಅವರನ್ನು ಒಂದು ವರ್ಷ ಶಿಕ್ಷೆಗೊಳಪಡಿಸಿದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಳ್ಳುತ್ತದೆ ಎಂಬ ಅನುಮಾನವಿತ್ತು.

ಆದರೆ ಅವರ ನಾಮಪತ್ರ ಅಂಗೀಕರಿಸಿದ್ದರಿಂದ ಮತ್ತು ಎಳಂಗೋ ನಾಮಪತ್ರ ಹಿಂಪಡೆದದ್ದರಿಂದ  ವೈಕೋ ಸಂಸತ್‌ನ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣಾ ವೇಳೆ ಮಾಡಿಕೊಳ್ಳಲಾದ ಒಪ್ಪಂದದನ್ವಯ ವೈಕೊ ಅವರ ಪಕ್ಷಕ್ಕೆ ಸೀಟು ಹಂಚಿಕೆಯಂತೆ ಒಂದು ಸ್ಥಾನವನ್ನು ನೀಡಲಾಗಿತ್ತು.

23 ವರ್ಷಗಳ ನಂತರ ವೈಕೋ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ವೈಕೊ ಈ ಹಿಂದೆ 1978 ರಿಂದ 1996 ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

ಟಿ ರಥಿನವೆಲ್, ವಿ ಮೈತ್ರೇಯನ್, ಕೆ ಬಿ ಅರ್ಜುನನ್, ಆರ್ ಲಕ್ಷ್ಮಣನ್ (ಎಲ್ಲರೂ ಎಐಎಡಿಎಂಕೆ), ಸಿಪಿಐನ ಡಿ ರಾಜ ನಿವೃತ್ತಿಯಾದ್ದರಿಂದ  ಹಾಗೂ ಲೋಕಸಭೆಗೆ ಆಯ್ಕೆಯಾದ ನಂತರ ಡಿಎಂಕೆಯ ಕಣಿಮೊಳಿ  ರಾಜೀನಾಮೆ ನೀಡಿದ ಕಾರಣ ಆರು ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಗಿತ್ತು.

Leave a Comment