ತಬ್ಲೀಗಿ ಸಮಾವೇಶ 20 ಜನರ ಪತ್ತೆಗೆ ಮನವಿ

ಮುಂಬಯಿ, ಏ. ೩- ರಾಜ್ಯದಿಂದ ದೆಹಲಿಯ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ 20 ಜನರನ್ನು ಹುಡುಕಲು ರಾಜ್ಯ ಪೊಲೀಸರು ರೈಲ್ವೆ ಇಲಾಖೆಯ ನೆರವು ಕೋರಿದ್ದಾರೆ.
ಇದುವರೆಗೂ ರಾಜ್ಯದಿಂದ ದೆಹಲಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದು, 150 ಮಂದಿ ಪೈಕಿ 130 ಜನರನ್ನು ಪತ್ತೆ ಹಚ್ಚಲಾಗಿದ್ದು, ಉಳಿದ 20 ಜನರ ಪತ್ತೆಗೂ ಪೊಲೀಸ್ ಇಲಖೆ ಎಲ್ಲಾ ಪ್ರಯತ್ನ ಕೈಗೊಂಡಿರುವ ಬೆನ್ನಲ್ಲಿ ಪೊಲೀಸ್ ಇಲಾಖೆ ನೆರವಿನೊಂದಿಗೆ ಪತ್ತೆ ಹಚ್ಚಲು ಮುಂದಾಗಿದೆ.
ಇದುವರೆವಿಗೂ ದೇಶಾದ್ಯಂತ 51 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಂದು ಮಿಲಿಯನ್ ಪ್ರಕರಣಗಳು ದೃಢಪಟ್ಟಿವೆ. ಬಹುತೇಕ ಎಲ್ಲಾ ದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಾಮಾಜಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಒಂದೆಡೆ ಜನರು ಗುಂಪು ಸೇರುವುದನ್ನು ನಿಷೇಧಿಸಿ, ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.
ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರ ಜೀವ ಸದ್ಯ ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅಪಾಯದಲ್ಲಿದೆ. ಮುಂಬೈ ಪೊಲೀಸರು ರಾಜ್ಯದಿಂದ ಭಾಗವಹಿಸಿದ್ದ ಬಹುತೇಕ ಮಂದಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ 20 ಜನರನ್ನು ಇನ್ನು ಪತ್ತೆ ಹಚ್ಚಬೇಕಿದೆ. ಸದ್ಯದ ಮಾಹಿತಿಯನ್ವಯ ದೆಹಲಿಯ ಧಾರ್ಮಿಕಸಭೆಯಲ್ಲಿ ಪಾಲ್ಗೊಂಡು ಹಿಂದಿರುಗಿರುವ 130 ಮಂದಿಯಲ್ಲಿ ಕೊರೊನಾ ಸೋಂಕು ಸೂಚನೆಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.

Leave a Comment