ತನ್ವೀರ್ ಸೇಠ್ ಮೇಲೆ ಹಲ್ಲೆ: ಆರೋಪಿ ಫರಾನ್‌ಗೆ ತರಬೇತಿ

ಮೈಸೂರು,ನ,೨೧- ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಕುರಿತ ತನಿಖೆ ಚುರುಕುಗೊಂಡಿದ್ದು, ಹಲ್ಲೆ ನಡೆಸಿದ ಆರೋಪಿಗೆ ವ್ಯವಸ್ಥಿತ ತರಬೇತಿ ನೀಡಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ.

ಆರೋಪಿ ಫರಾನ್ ಪಾಷಾ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನ ಪೊಲೀಸರು ಪರಿಶೀಲಿಸಿದ್ದು, ಆರೋಪಿ ಫರಾನ್ ಸಂಗೀತ ಕಾರ್ಯಕ್ರಮದಲ್ಲಿ ಹೊಂಚು ಹಾಕಿ ಶಾಸಕ ತನ್ವೀರ್ ಸೇಠ್ ಮೇಳೆ ಹಲ್ಲೆ ನಡೆಸಿದ್ದನು. ಮಚ್ಚಿನಿಂದ ನೇರವಾಗಿ ಕತ್ತಿಗೆ ಹೊಡೆದಿದ್ದನು.

ಈ ನಡುವೆ ಹಲ್ಲೆ ನಡೆಸಿದ ಆರೋಪಿ ಫರ್ಹಾನ್ ಪಾಷಾಗೆ ವ್ಯವಸ್ಥಿತ ತರಬೇತಿ ನೀಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲು ಬಯಲಾಗಿದೆ. ಇನ್ನು ತರಬೇತಿ ಎಲ್ಲಿ, ಹೇಗೆ ನೀಡಲಾಗಿತ್ತು ಎಂಬುದರ ಬಗ್ಗೆ ಪೋಲಿಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.. ಈ ನಡುವೆ ಆರೋಪಿ ಫರ್ಹಾನ್ ಮೊಬೈಲ್ ಕರೆಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದು, ಸಂಶಯಾಸ್ಪದ ವ್ಯಕ್ತಿಗಳನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ

ತನ್ವೀರ್ ಸೇಠ್ ಆರೋಗ್ಯ ಸ್ಥಿರ
ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿರವಾಗಿದೆ. ಇಂದು ಸಂಜೆ ವೇಳೆಗೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮುಖ್ಯ ಅಧೀಕ್ಷಕ ಡಾ.ಉಪೇಂದ್ರ ಶಣೈ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿ ಡಾ.ಉಪೇಂದ್ರ ಶಣೈ, ಕಿವಿ ತುಂಡರಿಸಿದ್ದರಿಂದ ಹೊಲಿಗೆ ಹಾಕಲಾಗಿತ್ತು.

ಆದರೆ ಆ ಭಾಗ ಕಪ್ಪನೆಯ ಬಣ್ಣಕ್ಕೆ ತಿರುಗಿತ್ತು. ಪರಿಣಾಮ ಹೊಲಿದಿದ್ದ ಕಿವಿಯನ್ನ ತುಂಡರಿಸಿ ತೆಗೆದು ಹಾಕಲಾಗಿದೆ. ಅದನ್ನು ಅವರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಅವರಿಗೆ ನೀಡಿದ್ದೇವೆ. ಕಿವಿಯ ಭಾಗವನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ. ಕತ್ತಿನ ನರಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ವಲ್ಪ ಊತ ಕಾಣಿಸಿಕೊಂಡಿದೆ. ಅವರು ಮಾತನಾಡುವಾಗ, ನಗುವಾಗ ತುಟಿ ಸ್ವಲ್ಪ ಓರೆ ಆದಂತೆ ಕಂಡುಬರುತ್ತಿದೆ. ಮುಂದಿನ ಮೂರು ವಾರಗಳ ನಂತರ ಇದು ಸರಿಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

Leave a Comment