ತನ್ಮಯತೆಯಲ್ಲಿ ಭಕ್ತಿ ಮನಗಂಡ ಕೀರ್ತಿ ಎಕ್ಕುಂಡಿರದ್ದು

ರಾಯಚೂರು.ಆ.13- ತನ್ಮಯತೆಯಲ್ಲಿಯೇ ಭಕ್ತಿಯನ್ನು ಮನಗಂಡ ಕೀರ್ತಿ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರಿಗೆ ಸಲ್ಲುತ್ತದೆ ಎಂದು ಕನ್ನಡ ಸಲಹಾ ಮಂಡಳಿ ಹಾಗೂ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀಧರ ಬಳಗಾರ ಅಭಿಪ್ರಾಯ ಪಟ್ಟರು.
ನಗರದ ಎಸ್‌ಆರ್‌ಕೆ ಬಿಇಡ್ ಕಾಲೇಜಿನ ಟ್ಯಾಗೋರ್ ಸಭಾಭವನದಲ್ಲಿ ಸಾಹಿತ್ಯ ಅಕಾಡೆಮಿ ಹಾಗೂ ಲೋಹಿಯಾ ಪ್ರತಿಷ್ಠಾನ ರಾಯಚೂರು ಜಂಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸು.ರಂ.ನಕ್ಕುಂದಿರವರ ಕಾವ್ಯಾವಲೋಕನದ ಒಂದು ದಿನದ ವಿಚಾರ ಗೋಷ್ಟಿ ಉದ್ಘಾಟಿಸಿ ಮಾತನಾಡಿದರು. ಅನುಭವವನ್ನೆ ಅನಾಯಸವಾಗಿ ಅನುವಾದಿಸಿದ ಕೀರ್ತಿ ಎಕ್ಕುಂಡಿಯವರದ್ದು. ಭೌತಿಕ ಜಗತ್ತಿನನಲ್ಲಿ ತುಳಿತಕ್ಕೊಳಗಾಗಿರುವ ಜನತೆ ನೋವ್ವನ್ನು ಕಾವ್ಯರೂಪಕ್ಕೆ ಪರಿವರ್ತಿಸಿದ ಕೀರ್ತಿ ಎಕ್ಕುಂಡಿ ಅವರಿಗೆ ಸಲ್ಲುತ್ತದೆಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋಹಿಯಾ ಪ್ರತಿಷ್ಠಾನ ಸಂಚಾಲಕ ಹಾಗೂ ಸಾಹಿತಿ ಭೀಮನಗೌಡ ಇಟಗಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಜನಸಮುದಾಯ, ಯುವ ಸಮೂಹದಲ್ಲಿ ಕಲಿಕೆ ಹವ್ಯಾಸ ಬೆಳೆಸುವ ಕಾರ್ಯವಾಗಬೇಕೆಂದರು. ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ, ಲೇಖಕರಿಗಾಗಿಯೇ ಹುಟ್ಟಿಕೊಂಡಿರುವ ಸಾಹಿತ್ಯ ಅಕಾಡೆಮಿ ಸಾಹಿತ್ಯಿಕ ಅಂಶಗಳನ್ನು ಜಗತ್ತಿನಾದ್ಯಂತ ಪಸರಿಸುವ ಪ್ರಾಮಾಣಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯವೆಂದರು.
ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ದಸ್ತಗಿರಿ ಸಾಬ್ ದಿನ್ನಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment