ತಡವಾಗಿ ಮದುವೆ: ಅವಧಿ ಪೂರ್ವ ಶಿಶು

ನಗರ ಪ್ರದೇಶಗಳಲ್ಲಿ ಗರ್ಭ ಧರಿಸಲು ವಿಳಂಬ ಮಾಡಿದ ಮಹಿಳೆಯರು ಅವಧಿಗೆ ಮುನ್ನವೇ ಮಗುವಿಗೆ ಜನನ. ಇದರಿಂದ ನವಜಾತ ಶಿಶುವಿನಲ್ಲಿ ಸೋಂಕುಗಳು ಹೆಚ್ಚಾಗುತ್ತದೆ ಎಂಬ ಆತಂಕಕಾರಿ ವಿಚಾರಗಳು ಹೊರ ಬಿದ್ದಿವೆ.
ತಡವಾಗಿ ಗರ್ಭ ಧರಿಸಿ, ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ ಬಗ್ಗೆ ನಡೆದಿರುವ ಅಧ್ಯಯನ ವರದಿಗಳ ಪ್ರಕಾರ ತಡವಾಗಿ ಅಂದರೆ ವಯಸ್ಸು ಹೆಚ್ಚಿದ ಮೇಲೆ ಗರ್ಭ ಧರಿಸುವ ಮಹಿಳೆಯರಿಗೆ ಅವಧಿ ಪೂರ್ವವೇ ಮಗುವಿಗೆ ಜನ್ಮ ನೀಡುತ್ತಾರೆ.
ಇದರಿಂದ ಜನನ ಸಂಬಂಧ ಸಮಸ್ಯೆಗಳು ಮತ್ತು ಸಂಕೀರ್ಣತೆಗಳು ಅಧಿಕವಾಗುತ್ತವೆ.
ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದು ತಡವಾಗುತ್ತಿದ್ದು, ಇದರಿಂದ ಅಕಾಲಿಕ ಅಂದರೆ, ಅವಧಿಗೆ ಮುನ್ನವೇ ಮಕ್ಕಳು ಆಗುತ್ತಿವೆ. ಇದರ ಜತೆಗೆ ತಡವಾಗಿ ಮದುವೆಯಾಗುವುದರಿಂದ ಗರ್ಭಧಾರಣೆ ಪ್ರಮಾಣ ಸಹ ಕಡಿಮೆಯಾಗುತ್ತಿದೆ ಎಂದು ವರದಿಗಳು ಹೇಳಿವೆ.
ಆರೋಗ್ಯವಂತ ಮಗು ಜನಿಸಬೇಕಾದರೆ ತಡವಾಗಿ ಗರ್ಭಧಾರಣೆ ನೀಡಿ ಎಂದು ವೈದ್ಯರು ಸಲಹೆ ಮಾಡುತ್ತಾರೆ. ಹೆಚ್ಚು ವಯಸ್ಸಾದಂತೆಲ್ಲಾ ಗರ್ಭ ಧರಿಸುವ ಫಲವತ್ತತೆಯನ್ನು ಮಹಿಳೆ ಕಳೆದುಕೊಳ್ಳಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮೊದಲ ಮಗುವನ್ನು ಪಡೆಯುವ ವಯಸ್ಸು ಅಧಿಕವಾಗಿರುತ್ತದೆ. ಇದು ಹಲವು ಅಪಾಯಗಳಿಗೆ ಮತ್ತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಾಸರಿ 35ನೇ ವಯಸ್ಸಿಗೆ ಮಗುವನ್ನು ಪಡೆಯುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಲ್ಲಿ ಪ್ರಸವ ಸಂಬಂಧಿತ ಗಂಭೀರ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ವೈದ್ಯರು. ಹಾಗಾಗಿ ಮದುವೆಯಾದ ದಂಪತಿಗಳು ಗರ್ಭಧಾರಣೆಗೆ ವಿಳಂಬ ಮಾಡುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

Leave a Comment