ತಂಬಾಕು ನಿಷೇಧಕ್ಕೆ ಮನವಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೨೮- ತಂಬಾಕು ಸೇವನೆಯಿಂದ ಆಗುತ್ತಿರುವ ಅವಘಡಗಳಿಂದ ಜನರನ್ನು ರಕ್ಷಿಸಲು ತಂಬಾಕು ವಸ್ತುಗಳ ಮೇಲೆ ನಿಷೇಧ ಹೇರಲು ಬಿಬಿಎಂಪಿ ನಿರ್ಣಯ ಕೈಗೊಳ್ಳಬೇಕು ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ. ವಿಶಾಲರಾವ್ ಅವರು ಮೇಯರ್ ಅವರಲ್ಲಿ ಮನವಿ ಮಾಡಿದ್ದಾರೆ.
ತಂಬಾಕು, ಸಿಗರೇಟು, ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪಾಲಿಕೆ ಸಭೆಯಲ್ಲಿಂದು ಪ್ರಾತ್ಯಕ್ಷಿಕೆ ನೀಡುವ ಮೂಲಕ ಮಾಹಿತಿ ನೀಡಿದ ಅವರು ತಂಬಾಕು ಸೇವನೆಯಿಂದ ಉಂಟಾಗುವ ವಿವಿಧ ರೋಗಗಳಿಂದಾಗಿ ಸುಮಾರು 10 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.
ಹೃದಯ ಖಾಯಿಲೆಗಿಂತ ತಂಬಾಕು ಸೇವನೆಯಿಂದ ಶ್ವಾಸಕೋಶದ ಮೇಲೆ ಆಗುವ ದುಷ್ಪರಿಣಾಮ ಗಂಭೀರ ಪ್ರಮಾಣದ್ದು ಕ್ರೋಮಿಯಂ ನಂತಹ ಹಲವಾರು ರಾಸಾಯನಿಕ ವಸ್ತುಗಳನ್ನು ಸೇರಿಸಿ ಉತ್ಪಾದಿಸುವ ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಯುವಕರೇ ತಂಬಾಕು ಸೇವನೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 16 ವರ್ಷದಲ್ಲೇ ತಂಬಾಕು ಸೇವನೆ ಆರಂಭಿಸಿ 60 ವರ್ಷದೊಳಗೆ ಕ್ಯಾನ್ಸರ್‌ನಂತಹ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಆರೋಗ್ಯಕ್ಕಾಗಿ ಸರ್ಕಾರ ಖರ್ಚು ಮಾಡುತ್ತಿದೆ ಎಂದ ಡಾ. ಶಾಲರಾವ್ ಅವರು ತಂಬಾಕು ಸೇವನೆಯಿಂದ ಧ್ವನಿ ಪೆಟ್ಟಿಗೆ, ನಾಲಿಗೆಗೆ ಹೆಚ್ಚು ಅಪಾಯಕಾರಿ ಎಂದು ಎಚ್ಚರಿಸಿದರು.

Leave a Comment