ತಂಬಾಕು ಚಟದಿಂದ ಯುವಸಮೂಹ ಮುಕ್ತರಾಗಲಿ

ದಾವಣಗೆರೆ.ಮಾ.15; ನಗರವನ್ನು ತಂಬಾಕು ಮುಕ್ತವನ್ನಾಗಿ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ನಗರ ಕೇಂದ್ರ ವೃತ್ತ ನಿರೀಕ್ಷಕರಾದ ಆನಂದ್ ಕರೆ ನೀಡಿದರು. ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿಂದು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ 13 (ಕೋಟ್ಪಾ) ವತಿಯಿಂದ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿನಿತ್ಯ ತಂಬಾಕು ಪ್ರಕರಣಗಳು ಬರುತ್ತಿವೆ. ಎಷ್ಟು ಪ್ರಕರಣ ದಾಖಲಾಗಿವೆ ಎನ್ನುವುದಕ್ಕಿಂತ ನಾವು ಎಷ್ಟು ಜನರನ್ನು ತಂಬಾಕು ಮುಕ್ತರನ್ನಾಗಿಸಿದ್ದೇವೆ ಎಂಬ ಬಗ್ಗೆ ಆತ್ಮ ಸಂತೋಷವಿರಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಶಾಲಾ ಕಾಲೇಜು ಸುತ್ತಮುತ್ತಲು ಸಿಗರೇಟ್, ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನಿಷೇಧ ಮಾಡಲಾಗಿದೆ. ಇದರಿಂದಾಗಿ ಎಷ್ಟೋ ಮಕ್ಕಳನ್ನು ರಕ್ಷಣೆ ಮಾಡಿದಂತಾಗಿದೆ. ಸಿಗರೇಟು, ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಮಾಡಿದರೆ ಇಂತಹ ಸಮಸ್ಯೆಗಳು ಬರುವುದಿಲ್ಲ. ಒಂದು ಕಡೆ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ. ಮತ್ತೊಂದು ಕಡೆ ಕಾಯ್ದೆ ರೂಪಿಸಲಾಗುತ್ತದೆ ಅದರ ಬದಲಾಗಿ ತಂಬಾಕು ನಿಷೇಧಿಸಿದರೆ ಇಂತಹ ಸಮಸ್ಯೆ ಉದ್ಬವಿಸುವುದಿಲ್ಲ. ಪ್ರಕರಣ ದಾಖಲಿಸುವುದರಿಂದ ಚಟ ಬಿಡಿಸಲು ಸಾಧ್ಯವಿಲ್ಲ ಅವರಲ್ಲೇ ತಿಳಿವಳಿಕೆ ಮೂಡಲಿ ಎಂಬ ಕಾರಣಕ್ಕೆ ಪ್ರಕರಣ ದಾಖಲು ಮಾಡಲಾಗುತ್ತದೆ ಆದರೂ ಸಹ ಕೆಲವರು ಉದ್ದಟತನದಿದಂದ ದಂಡ ಪಾವತಿಸಿ ಹೋಗುತ್ತಾರೆ. ಇಂತಹ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರ ಹೆಚ್ಚಾಗಬೇಕೆಂದರು.

ಡಿಹೆಚ್‍ಒ ಡಾ. ತ್ರಿಪುಲಾಂಬ ಮಾತನಾಡಿ ಯುವವ ಜನತೆ ಕುತೂಹಲಕ್ಕಾಗಿ ಇಂತಹ ಚಟಗಳಿಗೆ ಒಳಗಾಗುತ್ತಾರೆ. ಎಲ್ಲಾ ಇಲಾಖೆಗಳ ಸಹಕಾರದಿಂದ ತಂಬಾಕು ದುಷ್ಪರಿಣಾಮದ ಬಗ್ಗೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಜಿಲ್ಲಾಸ್ಪತ್ರೆಯಲ್ಲೂ ಸಹ ತಂಬಾಕು ಚಟ ಬಿಡಿಸುವ ಕೇಂದ್ರವಿದೆ.ತಂಬಾಕು ಚಟದಿಂದ ಯುವ ಸಮೂಹವನ್ನು ಮುಕ್ತರಾಗಿಸಬೇಕಾಗಿದೆ ಎಂದರು. ಈ ವೇಳೆ ಗಂಗಾಧರ್, ರಾಮಚಂದ್ರಪ್ಪ, ಬಸವಣ್ಣ, ಮಹೇಶ್ ದೇವರಾಜ್, ರಾಚಪ್ಪ ಇದ್ದರು.

Leave a Comment