ತಂಪು ತಂಪು ಗುಲ್ಕಂದ್

ದೇಹಕ್ಕೆ ತಂಪು: ಗುಲ್ಕಂದ್ ದೇಹದ ತಾಪವನ್ನು ಕಡಿಮೆ ಮಾಡಿ, ಸನ್ ಸ್ಟ್ರೋಕ್‌ಗಳಿಂದ ದೇಹವನ್ನು ಕಾಪಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಹೊಟ್ಟೆಯಲ್ಲಿನ ಆಸಿಡ್ ಅಂಶವನ್ನು ಸರಿದೂಗಿಸಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ರಕ್ತ ಶುದ್ದಿ: ಗುಲ್ಕಂದ್ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ರಕ್ತವನ್ನು ಶುದ್ದಿಗೊಳಿಸುತ್ತದೆ. ಈ ಮೂಲಕ ತ್ವಚೆಯ ಸಮಸ್ಯೆಗಳಾದ ಮೊಡವೆ, ಕೆಂಪು ಕಲೆಗಳು, ಬ್ಲ್ಯಾಕ್‌ಹೆಡ್ಸ್‌ನ್ನು ತೊಲಗಿಸುತ್ತದೆ ಮತ್ತು ಬಾರದಂತೆ ತಡೆಯುತ್ತದೆ.

ಒತ್ತಡ ಶಮನ: ಗುಲ್ಕಂದ್ ದೇಹಕ್ಕೆ ತಂಪು ನೀಡುವುದಲ್ಲದೇ ದೇಹದಲ್ಲಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಪೋಷಿಸುತ್ತದೆ.

ಋತುಚಕ್ರ ಆರಂಭದ ದಿನಗಳ ನೋವು ನಿವಾರಣೆ: ಋತುಚಕ್ರ ಆರಂಭದ ದಿನಗಳಲ್ಲಿ ಕಾಡುವ ಅತಿಯಾದ ಹೊಟ್ಟೆ ಮತ್ತು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅತಿ ರಕ್ತಸ್ರಾವವನ್ನು ತಡೆದು ಅನೀಮಿಯಾ ಸಮಸ್ಯೆಯಿಂದ ದೂರವಿರಿಸುತ್ತದೆ.

ಮೂಗಿನಲ್ಲಿ ರಕ್ತ ಬರುವುದನ್ನು ತಡೆಯುತ್ತದೆ: ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಮಕ್ಕಳಲ್ಲಿ ಈ ತರಹ ಮೂಗಿನಲ್ಲಿ ರಕ್ತ ಬರುವ ಸಮಸ್ಯೆ ಕಾಣಿಸುತ್ತದೆ. ನಿಯಮಿತವಾಗಿ ಗುಲ್ಕಂದ್ ಸೇವನೆಯಿಂದ ಈ ಸಮಸ್ಯೆಯನ್ನು ತಡೆಯಬಹುದು.

Leave a Comment