ತಂದೆ ಸೆಲ್ಫಿ ಕ್ಲಿಕ್ಕಿಸುವಾಗ ಬಿದ್ದು ನೀರು ಪಾಲಾದ ೪ ವರ್ಷದ ಮಗು

ನಾಮಕ್ಕಲ್,ಆ.೨೩- ಪ್ರವಾಹದಂತೆ ಹರಿಯುತ್ತಿದ್ದ ಕಾವೇರಿ ನದಿಯ ಸೇತುವೆ ಮೇಲೆ ನಿಂತು ತಂದೆ ತನ್ನ ನಾಲ್ಕು ವರ್ಷದ ಮಗುವಿನ ಜತೆ ಸೆಲ್ಫಿ ಕ್ಲಿಕ್ಕಿಸುವ ವೇಳೆ ಆಕಸ್ಮಿಕವಾಗಿ ಕೈಜಾರಿ ನದಿಗೆ ಬಿದ್ದು ನೀರು ಪಾಲಾದ ದುರಂತ ನಡೆದಿದೆ.

ಎಲ್‌ಜಿಪಿ ನಗರದ ನಿವಾಸಿಗಳಾದ ಬಾಬು, ಸೋಫಿಯಾ ದಂಪತಿಗಳ ಪುತ್ರ ಕಾವೇರಿಯಲ್ಲಿ ಕೊಚ್ಚಿಹೋದ ದುರಂತ ಬಾಲಕ.
ಧನ್ವಂತ್‌ನ ಕರೂರಿನಲ್ಲಿ ನರ್ಸರಿ ಓದುತ್ತಿರುವ ಮಗನನ್ನು ಕರೆದುಕೊಂಡು ತಂದೆ ಬಾಬು ವೆಂಗಲ್‌ನಿಂದ ಮೋಹನೂರಿಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಇದ್ದ ಸೇತುವೆ ಮೇಲೆ ನಿಂತು ಮಗನೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ವೇಳೆ ಆಯತಪ್ಪಿ ಮಗ ನೀರಿಗೆ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಬು ಪೊಲೀಸರಿಗೆ ನೀಡಿದ ಮಾಹಿತಿಯಂತೆ, ೨೪ನೇ ಸ್ತಂಭದ ಬಳಿ ಮಗನನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಸೆಲ್ಫಿ ಕ್ಲಿಕ್ಕಿಸುವ ವೇಳೆ ದುರಂತ ಸಂಭವಿಸಿದೆ. ಕೂಡಲೇ ಬಾಬು ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಾವರಣೆ ನಡೆಸಿದರೂ ಮಗುವಿನ ಮೃತದೇಹ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಕೆಆರ್‌ಎಸ್ ಅಣೆಕಟ್ಟಿನಿಂದ ಪ್ರತಿ ನಿತ್ಯ ೨ ಲಕ್ಷ ಕ್ಯುಸೆಕ್ಸ್ ನೀರು ಹರಿಬಿಡಲಾಗುತ್ತಿದೆ. ಆದ್ದರಿಂದ ನೀರಿನ ಸೆಳೆತ ಹೆಚ್ಚಿದ್ದು ಸುಮಾರು ೧೨ ಕಿ.ಮೀವರೆಗೂ ಪತ್ತೆ ಕಾರ್ಯ ನಡೆಸಿದರೂ ಮಗು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Leave a Comment