ತಂದೆಗೆ ನೀಡಿದ ಭಾರತ ರತ್ನ ಪ್ರಶಸ್ತಿ ರೋಮಾಂಚನ ತೇಜ್ ಹಜಾರಿಕಾ

 

 

ಗುವಾಹಟಿ, ಫೆ.12- ನನ್ನ ತಂದೆ ಖ್ಯಾತ ಗಾಯಕ ಭೂಪೆನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ನೀಡಿದ ಭಾರತ ರತ್ನ ಪ್ರಶಸ್ತಿಯ ರೋಮಾಂಚನ ಕ್ಷಣಿಕವಾಗಿದೆ ಎಂದು 2016ರ ನಾಗರಿಕತೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ತೇಜ್ ಹಜಾರಿಕಾ ಹೇಳಿದ್ದಾರೆ.

 

ತೀವ್ರ ವಿರೋಧಕ್ಕೊಳಗಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸದ್ಯದಲ್ಲೇ ಜಾರಿಗೆ ತರಲಾಗುತ್ತಿದ್ದು, ಇದೇ  ಸಂದರ್ಭದಲ್ಲಿ ನನ್ನ ತಂದೆಯವರಿಗೆ ನೀಡಿಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಸಂಭ್ರಮಿಸಲಾಗುತ್ತಿದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಸರ್ಕಾರ ತುದಿಗಾಲಲ್ಲಿ ನಿಂತಿರುವುದರಿಂದ ಪ್ರಶಸ್ತಿಯ ರೋಮಾಂಚನ ಕ್ಷಣಿಕ ಮಾತ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆಯಲ್ಲಿ ಅಂಗೀಕರಿಸಲಾದ ಪೌರತ್ವ ಮಸೂದೆ ವಿರೋಧಿಸಿ ಆಸ್ಸಾಂ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ರಾಜ್ಯಸಭೆಯ ಅನುಮೋದನೆಗಾಗಿ ಸದನದಲ್ಲಿ ಮಂಡಿಸಲಾಗಿದೆ.

 

Leave a Comment