ಡ್ರೈನೇಜ್ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ

ಹೊನ್ನಾಳಿ, ಫೆ. 17 – ಎಲೆಬಳ್ಳಿ ಕೊಯ್ಯುವ ವ್ಯಕ್ತಿಯೊಬ್ಬನ ಶವ ಹೊನ್ನಾಳಿ ತಾಲ್ಲೂಕಿನಲ್ಲಿ ಪತ್ತೆಯಾಗಿದೆ. ಚಂದ್ರಪ್ಪ (48) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಮೂಲತಃ ಹಿರೇಕೇರೂರು ತಾಲ್ಲೂಕಿನ ಪುರತಗೇರಿಯ ಚಂದ್ರಪ್ಪ ತಾಲ್ಲೂಕಿನ ರೈತರ ಜಮೀನುಗಳಲ್ಲಿ ಎಲೆಬಳ್ಳಿಯನ್ನು ಕೊಯ್ಯುತ್ತಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಹೊನ್ನಾಳಿಯ ತುಮ್ಮಿನಕಟ್ಟೆಗೆ ಹೋಗುವ ರಸ್ತೆಯಲ್ಲಿ ಡ್ರೈನೇಜ್ ಗುಂಡಿಯಲ್ಲಿ ಚಂದ್ರಪ್ಪ ಶವ ದೊರೆತಿದೆ. ಘಟನಾ ಸ್ಥಳಕ್ಕೆ ಸಿಪಿಐ ರಮೇಶ್, ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment