ಡ್ರಿಂಕ್ ಅಂಡ್ ಡ್ರೈವ್’ : ಬೆಂಗಳೂರಿನಲ್ಲಿ ಎಎಸ್‌ಐ ಗೆ ಕಪಾಳ ಮೋಕ್ಷ

ಬೆಂಗಳೂರು.ಸೆ.೧೩ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಆರೋಪಿಯೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ನಗರದ ಜೆಬಿ ನಗರದಲ್ಲಿ ನಡೆದಿದೆ.

ಆರೋಪಿ ಕೇಶವ್ ಗುಪ್ತಾ ಎಂಬಾತ ರಾಜಸ್ತಾನ ಮೂಲದ ವ್ಯಕ್ತಿ ಜೀವನ್ ಭೀಮಾನಗರ ಟ್ರಾಫಿಕ್ ಸಹಾಯಕ ನಿರೀಕ್ಷಕ (ಎಎಸ್‍ಐ) ಶಿವಪ್ಪ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಆರೋಪಿ ಕೇಶವ್ ಗುಪ್ತಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜೆಬಿ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳದಿಂದ ಪರಾರಿಯಾಗಲು ಕೇಶವ್ ಯತ್ನಿಸಿದ್ದು, ಆ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಬರುವಂತೆ ಸೂಚಿಸಿದ್ದಾರೆ. ಬಳಿಕ ಕೇಶವ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯ ಸಂಬಂಧ ನಗರದ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಮತ್ತು ಮಹಿಳಾ ಪಿಎಸ್‍ಐ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಇಂದಿರಾ ನಗರದ ಪೊಲೀಸರು ಬಂಧಿಸಿದ್ದಾರೆ.

Leave a Comment