ಡ್ಯಾನ್ಸ್ ಮಾಡಿ ಸಂಚಾರ ನಿಯಂತ್ರಿಸುವ ಪೇದೆಗೆ ಮೆಚ್ಚುಗೆ

ಒಡಿಸ್ಸಾ, ಸೆ ೧೨- ಮುಖಗಂಟಿಕ್ಕಿಕೊಂಡು ಸಂಚಾರ ನಿಯಂತ್ರಣ ಮಾಡುವ ಪೊಲೀಸರೇ ದೇಶದಲ್ಲಿ ತುಂಬಿರುವಾಗ, ಒಡಿಸ್ಸಾದಲ್ಲಿ ಒಬ್ಬ ಪೇದೆ ಡ್ಯಾನ್ಸ್ ಮೂಲಕವೇ ಟ್ರಾಫಿಕ್ ಕಂಟ್ರೋಲ್ ಮಾಡುವ ಮೂಲಕ ದೇಶದ್ಯಾದಂತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಒಡಿಸ್ಸಾದ ಭುವನೇಶ್ವರ್ ನಗರದಲ್ಲಿ ಹೋಂ ಗಾರ್ಡ್ ಆಗಿರುವ ೩೩ ವರ್ಷದ ಪ್ರತಾಪ್ ಚಂದ್ರ ಖಾಂಡ್ವಾಲ್ ಇದೀಗ ಸಾಮಾಜಿಕ ಜಾಲತಾಣದ ಕೇಂದ್ರ ಬಿಂದು. ಸದ್ಯ ಸಂಚಾರಿ ನಿಯಂತ್ರಣದ ಕಾರ್ಯದಲ್ಲಿ ನಿರತನಾಗಿದ್ದಾರೆ. ಈತ ಸಂಚಾರಿ ನಿಯಂತ್ರಣಕ್ಕೆಂದು ಬಳಸುವ ವಿಶಿಷ್ಠ ಚಲನವಲನದ ವಿಡಿಯೋ ಇದೀಗ ವೈರಲ್ ಆಗಿದೆ.

ಡಾನ್ಸ್ ಮೂಲಕ ಸಂಚಾರ ನಿಯಂತ್ರಿಸುವ ಈತನ ಪ್ರಕಾರಕ್ಕೆ ಆರಂಭದಲ್ಲಿ ತಿರಸ್ಕಾರಗೊಂಡು, ಡಾನ್ಸ್ ಮೂಲಕ ನೀಡುತ್ತಿದ್ದ ಸಂದೇಶವನ್ನು ಅನೇಕ ಸವಾರರು ಸ್ವೀಕರಿಸುತ್ತಿರಲಿಲ್ಲ. ಆದರೆ ಈ ವಿಶಿಷ್ಠ ನಡೆಯನ್ನು ಸಮಯ ಕಳೆದಂತೆ ಜನ ಒಪ್ಪಿಕೊಂಡಿದ್ದು, ಎಲ್ಲರೂ ನಾನು ನೀಡುವ ಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದಿದ್ದಾನೆ.

ಡಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ಭಾರಿ ಫಾಲೋವರ್ಸ್ ಸೃಷ್ಠಿಯಾಗಿದ್ದು, ಫೇಸ್‌ಬುಕ್‌ನಲ್ಲಿ ಮಾತ್ರವೇ ಸುಮಾರು ೫೦ ಸಾವಿರ ಜನ ಈತನ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

Leave a Comment