ಡೊನಾಲ್ಡ್  ಟ್ರಂಪ್  ರೋಡ್ ಶೋನಲ್ಲಿ  ಲಕ್ಷ ಜನ ಭಾಗಿ…!

ಅಹಮದಾಬಾದ್, ಫೆ 20 –  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಪಿಎಂ ನರೇಂದ್ರ ಮೋದಿ   ತವರುನಾಡು,  ಗುಜರಾತಿನ ಅಹಮದಾಬಾದಿನಲ್ಲಿ ಸೋಮವಾರ ಕೈಗೊಳ್ಳುವ  ರೋಡ್ ಶೋನಲ್ಲಿ ವಿವಿಧ ವರ್ಗ, ಸಮುದಾಯದ ಒಂದು ಲಕ್ಷ ಜನರು ಭಾಗಿಯಾಗಲಿದ್ದಾರೆ.

ಟ್ರಂಪ್ ಅವರನ್ನು ಸ್ವಾಗತಿಸಲು ಸುಮಾರು 70 ಲಕ್ಷ ಜನರು ರೋಡ್ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಹಿಂದೆ ಭಾರಿ ಸುದ್ದಿ  ಮಾಡಲಾಗಿತ್ತು . ಇದೇ ಮಾತನ್ನು ಟ್ರಂಪ್  ಕೂಡಾ ಹೇಳಿದ್ದರು. ಇದೇ ಕಾರಣಕ್ಕೆ ಪಾಲಿಕೆ  ಅಧಿಕಾರಿಗಳು, ರೋಡ್ ಶೋನಲ್ಲಿ 70 ಲಕ್ಷ ಜನರು ಭಾಗವಹಿಸುವುದಿಲ್ಲ ಬದಲಾಗಿ ಕೇವಲ , ಒಂದು ಲಕ್ಷ ಜನರು ಭಾಗವಹಿಸುತ್ತಿದ್ದಾರೆ  ಎಂದೂ   ಸ್ಪಷ್ಟ ಪಡಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಬರುವ ಸೋಮವಾರ ಅಹಮದಾಬಾದ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ 22ಕಿಲೋಮೀಟರ್  ರೋಡ್ ಶೋನಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ.

ಸಬರಮತಿ ಆಶ್ರಮದಿಂದ ಮೊಟೇರಾ ಕ್ರೀಡಾಂಗಣದ ವರೆಗೆ ಈ ರೋಡ್ ಶೋ ನಡೆಯಲಿದ್ದು ನಂತರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಜರುಗಲಿದೆ. ಇದಕ್ಕಾಗಿ  ನಗರವನ್ನು  ನವವಧುವಿನಂತೆ ಸಿಂಗಾರ ಗೊಳಿಸಲಾಗಿದೆ.

Leave a Comment