ಡೊಂಗ್ರಿ ಗ್ರಾ.ಪಂ ಕಡತ ಸಂಪೂರ್ಣ ನಾಶ

ಅಂಕೋಲಾ, ಆ 14- ಗಂಗಾವಳಿ ನದಿಯ ನೆರೆಗೆ ಡೊಂಗ್ರಿ ಗ್ರಾಮ ಪಂಚಾಯತ ಕಾರ್ಯಾಲಯ 5 ದಿನಗಳ ಕಾಲ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿ ಕಚೇರಿಯಲ್ಲಿರುವ ಸಂಪೂರ್ಣ ಕಡತಗಳು ಮತ್ತು ಪಿಠೋಪಕರಣ ನಾಶವಾಗಿದೆ.
ಡೊಂಗ್ರಿ ಗ್ರಾಮದಲ್ಲಿ ಏಕಾಏಕಿ ನೀರು ತುಂಬಿದ ಪರಿಣಾಮ ಗ್ರಾ.ಪಂ ಕಾರ್ಯಾಲಯವು ಮುಳುಗಡೆ ಆಗಿತ್ತು. ಇಲ್ಲಿರುವ ದಾಖಲೆಗಳನ್ನು ಮತ್ತು ಪಿಠೋಪಕರಣ ಬೇರೆಡೆ ಸಾಗಿಸಲು ಸಾಧ್ಯವಾಗಲಿಲ್ಲ. ಕಾಗದ ಪತ್ರಗಳು ಸ್ವಲ್ಪ ನೀರಿನಲ್ಲಿ ಕೊಳೆತು ಹೋಗಿದ್ದರೆ ಇನ್ನೂಳಿದವು ಕೊಳಚೆ ರಾಡಿಯಲ್ಲಿ ಒದ್ದೆಯಾಗಿದೆ. ಕಂಪ್ಯೂಟರ ಮತ್ತು ಇತರ ಪಿಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ರಾಡಿಯಲ್ಲಿ ಕೂಡಿಕೊಂಡು ಉಪಯೋಗಕ್ಕೆ ಬಾರದಾಗಿದೆ. ಗ್ರಾ.ಪಂದ ಅತಿ ಹೆಚ್ಚು ಹಾನಿಗಳ ಜೊತೆಯಲ್ಲಿ ಸಂಚಾರವು ಸ್ಥಗಿತಗೊಂಡಿದ್ದು ಸಂಪರ್ಕ ಕಲ್ಪಿಸುವ ಎರಡು ತೂಗು ಸೇತುವೆಗಳು ನೀರಿನ ಸೆಳೆತಕ್ಕೆ ಕೊಚ್ಚಿಹೋಗಿವೆ.
ಗ್ರಾ.ಪಂ ಕಚೇರಿಗೆ ತಹಶೀಲ್ದಾರ ಅಶೋಕ ಗುರಾಣಿ, ತಾ.ಪಂ ಇಓ ಕರಿಂ ಅಸದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಆದರೆ ನನ್ನ ಗ್ರಾ.ಪಂದ ಕಡತಗಳು ಮತ್ತು ಪಿಠೋಪಕರಣ ಸಂಪೂರ್ಣ ಹಾಳಾಗಿವೆ. ನಮ್ಮ ಜೀವಿತಾವಧಿಯಲ್ಲಿ ಈ ರೀತಿಯ ನೆರೆ ಕಂಡಿರಲಿಲ್ಲ. ಡೊಂಗ್ರಿ ಗ್ರಾ.ಪಂದಲ್ಲಿಯೆ ಹೆಚ್ಚಿನ ಹಾನಿ ಸಂಭವಿಸಿದೆ. 4 ಕೋಟಿ ಅಂದಾಜು ವೆಚ್ಚದ ಎರಡು ತೂಗು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಗ್ರಾ.ಪಂ ಪುನರ ರಚನೆ ಆಗಬೇಕಿದೆ.
ಗಿರೀಶ ನಾಯಕ
ಪಿಡಿಓ ಡೊಂಗ್ರಿ ಗ್ರಾ.ಪಂ

Leave a Comment