ಡೈನಾಮಿಕ್ ಪ್ರಿನ್ಸ್; ದತ್ತು ಪಡೆದ ಶಾಲೆಗೆ ಪುಸ್ತಕ ವಿತರಣೆ

  ಬೆಂಗಳೂರು, ಜು 4- ಆತ ದಿನದ 18 ಗಂಟೆ ನಿದ್ದೆ ಮಾಡ್ತಾನೆ, ಪ್ರೀತಿ, ಪ್ರೇಮ ಊಟ ಮತ್ತಿತರ ಕೆಲಗಳಿಗೆ ಉಳಿದ 6 ಗಂಟೆ  ಇದ್ಯಾರಪ್ಪ ಅಂತೀರಾ?  ಇವನೇ ಜಂಟಲ್ ಮನ್ ಕುಂಭಕರ್ಣ  ನಿರ್ದೇಶಕ ಗುರುದೇಶಪಾಂಡೆ ಪ್ರೊಡಕ್ಷನ್ಸ್ ಚೊಚ್ಚಲ ಚಿತ್ರ ಇದಾಗಿದ್ದು ಪ್ರಜ್ವಲ್ ದೇವರಾಜ್ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ  ಜುಲೈ 04ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡೈನಾಮಿಕ್ ಪ್ರಿನ್ಸ್ ಗೆ ಚಿತ್ರತಂಡ ಟೀಸರನ್ನೇ ಉಡುಗೊರೆಯಾಗಿ ಬಿಡುಗಡೆ ಮಾಡಿದೆ  ಅಂದಹಾಗೆ ಪ್ರಜ್ವಲ್ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದು, ತಮ್ಮ ಜನ್ಮದಿನದಂದು ಹಾರ,ತುರಾಯಿ ಬದಲು ಪುಸ್ತಕವನ್ನು ಪಡೆದು, ಅವುಗಳನ್ನು ಶಾಲೆಗೆ ನೀಡಿದ್ದಾರೆ

  ನಿರ್ದೇಶಕನಿಂದ ನಿರ್ಮಾಪಕನ ಸ್ಥಾನಕ್ಕೇರಿರುವ ಗುರುದೇಶಪಾಂಡೆ, ಜಂಟಲ್ ಮನ್’ ಚಿತ್ರದ ನಿರ್ದೇಶನದ ಹೊಣೆಯನ್ನು ಗೆಳೆಯ ಜಡೇಶ್ ಕುಮಾರ್ ಹಂಪಿಯವರಿಗೆ ವಹಿಸಿದ್ದಾರೆ  “ಜಡೇಶ್ ಹೇಳಿದ ಕಥೆ ತುಂಬಾ ವಿಶಿಷ್ಟವಾಗಿತ್ತು   ಹೀಗಾಗಿ ಆ ಚಿತ್ರವನ್ನು ನಾನೇ ನಿರ್ಮಿಸಿ, ನಿರ್ದೇಶನದ ಹೊಣೆಯನ್ನು ಅವರಿಗೇ ನೀಡಿದೆ” ಎಂದು ಗುರುದೇಶಪಾಂಡೆ ತಿಳಿಸಿದ್ದಾರೆ

  “ಅತಿಹೆಚ್ಚು ನಿದ್ರೆ ಮಾಡುವ ಕಾಯಿಲೆಯಿಂದ ಬಳಲುವ ನಾಯಕನ ಜೀವನದಲ್ಲಿ ಯಾವೆಲ್ಲ ಸಮಸ್ಯೆ ಎದುರಾಗುತ್ತದೆ, ಆತ ಅದರಿಂದ ಹೊರಬರುವುದು ಹೇಗೆ ಎಂಬುದು ಚಿತ್ರದ ತಿರುಳು” ಎಂದು ನಿರ್ದೇಶಕ ಜಡೇಶ್ ಕುಮಾರ್ ಹೇಳಿದ್ದಾರೆ.

  ಡಂಪಿಂಗ್ ಯಾರ್ಡ್ ನಲ್ಲಿ ಶೂಟಿಂಗ್!  ‘ಜಂಟಲ್ ಮನ್’ ಚಿತ್ರಕ್ಕಾಗಿ ಮೈಸೂರಿನ ಡಂಪಿಂಗ್ ಯಾರ್ಡ್ ನಲ್ಲಿ ಶೂಟಿಂಗ್ ನಡೆಸಲಾಗಿದೆ  ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 7 ವರ್ಷದ ಕಸದ ನಡುವೆ ಪ್ರಜ್ವಲ್ ಯಾವುದೇ ಬೇಸರ ವ್ಯಕ್ತಪಡಿಸದೆ ಪಾಲ್ಗೊಂಡರು” ಎಂದು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಪ್ರಜ್ವಲ್ ಗೆ ಜೋಡಿಯಾಗಿ ‘ಪಡ್ಡೆಹುಲಿ’ಯ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. “ಶಿಸ್ತುಬದ್ಧ ಜೀವನಕ್ಕೆ ಒತ್ತು ನೀಡುವ, ತಪಸ್ವಿನಿ  ಹೆಸರಿನ ಡಯಟೀಶಿಯನ್ ಪಾತ್ರ ನನ್ನದು”ಎಂದು ಹೇಳಿಕೊಂಡಿದ್ದಾರೆ.

  ‘ಜಂಟಲ್ ಮನ್’ ಬಹುಪಾಲು ಚಿತ್ರೀಕರಣವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿ ಪ್ರೇಕ್ಷಕರೆದುರು ಬರಲು ಸಜ್ಜಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

 

Leave a Comment