ಡೇತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಹಾವೇರಿ, ಜ 22- ಕೊಟ್ಟ ಹಣವನ್ನು ಮರಳಿ ವಾಪಸ್ಸ್ ಕೊಡದಿದ್ದಕ್ಕೆ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಮನೋಜಕುಮಾರ ಬೆಣಗೇರಿ (26) ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಯುವಕ ಮನೋಜಕುಮಾರ ಬೇಕರಿಗಳಿಗೆ ಬಿಸ್ಕಿಟ್ ಪೂರೈಕೆ ಮಾಡುತ್ತಿದ್ದ. ಶ್ರೀಕಾಂತ ಬೆಳಲದವರ ಎಂಬಾತನಿಗೆ  3 ಲಕ್ಷ 40 ಸಾವಿರ ರೂಪಾಯಿ ಹಣ ಕೊಟ್ಟಿದ್ದೇನೆ. 90 ಸಾವಿರ ಮಾತ್ರ ಮರಳಿಸಿದ್ದಾನೆ. ಉಳಿದ ಹಣ ಕೇಳಿದರೆ ಕೊಡುವುದಿಲ್ಲ ಅಂತಾ ಕಾಡಿಸುತ್ತಿದ್ದಾನೆ‌.ಉಳಿದ ಹಣ ಕೊಡದಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರೋದಾಗಿ ಡೇತ್ ನೋಟ್ ಬರೆದಿಟ್ಟು ಮನೋಜಕುಮಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ವಾರಿ ಅಮ್ಮ ಅಪ್ಪ, ಆಂಟಿ ಹಾಗೂ ಅಜ್ಜಿ ಅಂತಾ ಡೇತ್ ನೋಟ್ ನಲ್ಲಿ ಬರೆದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment