ಡೆಪ್ಯೂಟಿ ಚೆನ್ನಬಸಪ್ಪ ಪುತ್ಥಳಿಗೆ ಜಿಲ್ಲಾಧಿಕಾರಿ ಪುಷ್ಪನಮನ

ಧಾರವಾಡ, ಆ.16 – 153 ವರುಷಗಳ ಹಿಂದೆಯೇ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಸಂಬೋಧಿಸಿದ ಕನ್ನಡದ ಕಟ್ಟಾಳು, ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ 73ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರದ ಪರವಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಾಲಾರ್ಪಣೆ ಮಾಡಿ ಗೌರವನಮನ ಸಲ್ಲಿಸಿದರು.
ಉಪವಿಭಾಗಾಧಿಕಾರಿ ಮೊಹಮ್ಮದ ಜುಬೇರ, ಜಿಲ್ಲಾ ಸಾ.ಶಿ. ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ನಿರ್ದೇಶಕ ಎಸ್.ಬಿ. ಕೊಡ್ಲಿ, ಸಹಾಯಕ ನಿರ್ದೇಶಕ ಶಂಕರ ಗಂಗಣ್ಣವರ, ಡಯಟ್ ಹಿರಿಯ ಉಪನ್ಯಾಸಕರುಗಳಾದ ಜಯಶ್ರೀ ಕಾರೇಕರ, ವೈ.ಬಿ.ಬಾದವಾಡಗಿ, ಜೆ.ಜಿ.ಸೈಯ್ಯದ್, ಡಾ.ಗುರುನಾಥ ಹೂಗಾರ, ಎಸ್.ಬಿ. ಮಲ್ಲಾಡದ, ಎಂ.ಕೆ.ಮರಿಗೌಡರ, ಡಯಟ್ ವಿವಿಧ ವಿಭಾಗಗಳ ಉಪನ್ಯಾಸಕರು, ಲಿಪಿಕ ನೌಕರರು, ಶಿಕ್ಷಕ-ಶಿಕ್ಷಕಿಯರು, ನಾಗರಿಕರು, ಶಾಲಾ ಮಕ್ಕಳು ಹಾಜರಿದ್ದು ಗೌರವ ನಮನ ಸಲ್ಲಿಸಿದರು. ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.
ರಾಷ್ಟ್ರಧ್ವಜಾರೋಹಣ : ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಛೇರಿಯಲ್ಲಿ ಜರುಗಿದ ಸ್ವಾತಂತ್ರ್ಯ ದಿನೋತ್ಸವದಲ್ಲಿ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಉಪನಿರ್ದೇಶಕರುಗಳಾದ ಮೃತ್ಯುಂಜಯ ಕುಂದಗೋಳ ಹಾಗೂ ಆರ್.ಎಸ್. ಮುಳ್ಳೂರ, ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿರ್ದೇಶಕ ಅರ್ಜುನ ಕಂಬೋಗಿ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ,  ಸಹಾಯಕ ನಿರ್ದೇಶಕರುಗಳಾದ ಜೆ.ಪ್ರಕಾಶ ಮತ್ತು ವ್ಹಿ.ಜಿ. ಬದಾಮಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಭಾರತ ಸೇವಾದಳದ ಜಿಲ್ಲಾ ಸಂಘಟಿಕ ಕಾಶಿನಾಥ ಹಂದ್ರಾಳ, ಅಧೀಕ್ಷಕರು ಹಾಗೂ ಲಿಪಿಕ ನೌಕರರು ಹಾಜರಿದ್ದರು.
ಸಿಸ್ಲೆಪ್ ಸಂಸ್ಥೆಯಲ್ಲಿ : ಡಯಟ್ ಆವರಣದಲ್ಲಿರುವ ರಾಜ್ಯ ಮಟ್ಟದ ತರಬೇತಿ ಸಂಸ್ಥೆಯಾಗಿರುವ ಸಿಸ್ಲೆಪ್-ಕರ್ನಾಟಕ ಸಂಸ್ಥೆಯಲ್ಲಿ ನಿರ್ದೇಶಕ ಬಿ.ಎಸ್. ರಘುವೀರ ತಿರಂಗಾ ಬಾವುಟ ಹಾರಿಸಿ ರಾಷ್ಟ್ರ ವಂದನೆ ಸಲ್ಲಿಸಿದರು. ಹಿರಿಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಸೇರಿದಂತೆ ಸಹಾಯಕ ನಿರ್ದೇಶಕರು, ಉಪನ್ಯಾಸಕರು, ಲಿಪಿಕ ನೌಕರರು ಇದ್ದರು.

Leave a Comment