ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ನೆರೆಮನೆಯ ಮಹಿಳೆಯ ವಿರುದ್ಧ ದೂರು

ಕಾರ್ಕಳ, ನ.೯- ಅಜೆಕಾರು ಸಮೀಪದ ಮರ್ಣೆ ಗ್ರಾಮದ ಬೊಂಡುಕುಮೇರಿ ಎಂಬಲ್ಲಿ ನ.೪ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಸಂದೇಶ್(೨೭) ಎಂಬಾತನ ಸಾವಿಗೆ ನೆರೆಮನೆಯ ಪ್ರಭಾವತಿಯ ಬೆದರಿಕೆಯೇ ಕಾರಣ ಎಂಬುದಾಗಿ ಮರಣ ಪತ್ರದಲ್ಲಿ ಬರೆದಿದ್ದು, ಅದರಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನನ್ನ ಸಾವಿಗೆ ಪ್ರಭಾವತಿಯೇ ಕಾರಣ ಎಂದು ಮರಣಪತ್ರ ಬರೆದಿಟ್ಟಿದ್ದು, ಅವರಿಗೆ ಜೀವ ಬೆದರಿಕೆ ಹಾಕಿರುವ ವಿಷಯವು ಅದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನ.೬ರಂದು ಸಂದೇಶ್ ತಮ್ಮ ಮಂಜುನಾಥ ನಾಯ್ಕ ಮನೆಗೆ ಬಂದ ವೇಳೆ ಅನಂತ ಪದ್ಮನಾಭ ಎಂಬಾತ ಮೊಬೈಲ್ ಪೋನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಕೂಡಾ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

Leave a Comment