ಡೆಂಗ್ಯೂ ವಿರೋಧಿ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥಾ

ದಾವಣಗೆರೆ ಆ.8; ಕೀಟ ಚಿಕ್ಕದಾದರೂ ಕಾಟ ದೊಡ್ಡದು.. ನಿಂತ ನೀರು ಸೊಳ್ಳೆಯ ತವರೂರು… ಮನೆ ಸುತ್ತ ನೀರು ನಿಲ್ಲದಂತೆ ಸ್ವಚ್ಚತೆ ಕಾಪಾಡಿ… ಸೊಳ್ಳೆ ನಿಯಂತ್ರಣ ನಮ್ಮ ನಿಮ್ಮೆಲರ ಜವಾಬ್ದಾರಿ, ಯಾವುದೇ ಜ್ವರ ಇರಲಿ ರಕ್ತ ಪರೀಕ್ಷೆ ಮಾಡಿಸಿ… ಡೆಂಗ್ಯೂ ರೋಗದ ಕುರಿತು ಎಚ್ಚರಿಸುವಂತಹ ಘೋಷಣೆಗಳನ್ನು ಕೂಗುತ್ತಾ ಆರೋಗ್ಯ ಇಲಾಖೆಯಿಂದ ಇಂದು ನಗರದಲ್ಲಿ ಜಾಥಾ ನಡೆಸಲಾಯಿತು.

ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಆಜಾದ್ ನಗರ ಆಸ್ಪತ್ರೆ ಆವರಣ, ದಾವಣಗೆರೆ ಇಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಬ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿ.ಬಿ.ಡಿ.ಸಿ.ಪಿ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ತಾಲ್ಲೂಕು ವೈದ್ಯಾಧಿಕಾರಿ ಎಂ.ಎಲ್.ಪಾಟಿಲ್, ಭಾಷಾನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಷ್ಪಾವತಿ, ಆರೋಗ್ಯ ಸಹಾಯಕರು, ಬಾಪೂಜಿ ಕಾಲೇಜಿನ ಶುಶ್ರೂಷಕರು, ಆಶಾ ಕಾರ್ಯಕರ್ತೆಯರು, ಜಿಲ್ಲಾ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಜಾಥಾ ಆಜಾದ್ ನಗರದ ಪಿಹೆಚ್‍ಸಿ ಯಿಂದ ಗಾಂಧಿನಗರ ಪೊಲೀಸ್‍ಠಾಣೆ, ಮಾರ್ಕೆಟ್ ರಸ್ತೆ, ಬೇತೂರು ರಸ್ತೆ ಮೂಲಕ ಹಾಯ್ದು ಬಾಪೂಜಿ ನರ್ಸಿಂಗ್ ಕಾಲೇಜು ತಲುಪಿತು.
ಪೋಟೋ 8dph6

Leave a Comment