ಡೆಂಗ್ಯೂ ಜ್ವರಕ್ಕೆ ಭಯ ಬೇಡ

 

ಕಲಬುರಗಿ ಮೇ 16: ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾSಯ ವತಿಯಿಂದ ರಾಷ್ರ್ಟೀಯ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಯಿತು.  ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಿಂದ ಪ್ರಾರಂಭವಾಗಿ ಎಸ್,ಟಿ.ಬಿ.ಟಿ ಕ್ರಾಸ್ ಜಗತ್ ಸರ್ಕಲ್ ಮುಖಾಂತರ ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿವರೆಗೆ ಜರುಗಿತು.

ಜಾಥಾ ಉಧ್ಘಾಟಿಸಿದ ಜಿಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರ್.ಎಮ್.ಒ. ಡಾ.ರಾಜಶೇಕರ್ ಮಾಲಿ ಮಾತನಾಡಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು ಹಾಗೂ ಇನ್ನೂ ಮುಂದೆ ಮುಂಗಾರು ಮಳೆ ಪ್ರಾರಂಭವಾಗುತ್ತರುವ ಹಿನ್ನಲೆಯಲ್ಲಿ ಮನೆಯ ಹೊರಗಡೆ ಬಿಸಾಕಿದ ಘನ ತಾಜ್ಯ ವಸ್ತಗಳನ್ನು ಎಸೆಯವುದರಿಂದ ಅಲ್ಲಿ ಮಳೆಯ ನೀರು ಸಂಗ್ರಹವಾಗಿ ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟು ತಮ್ಮ ಸಂತಾನೋತ್ಪತ್ತಿ ಮಾಡಿ ತಮ್ಮ ಸಂತತಿಯನ್ನು ಬೆಳೆಸಿ ರೋಗ ಹರಡುವಿಕೆಗೆ ಕಾರಣವಾಗುತ್ತವೆ.ಈ ಸಂಭಂದವಾಗಿ ರಾಷ್ರ್ಟೀಯ ಡೆಂಗ್ಯೂ ದಿನಾಚರಣೆಯನ್ನು ಆಚರಸಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಡೆಂಗ್ಯೂ ಜ್ವರ ಹರಡಲು ಕಾರಣವಾಗಿರುವ ಈಡೀಸ್ ಸೊಳ್ಳೆಗಳು ಶೇಖರಿಸಿಟ್ಟ ಸ್ವಚ್ಛ ನೀರಿನಲ್ಲಿ ಸಂತನೋತ್ಪತ್ತಿ ಮಾಡುತ್ತವೆ ಮನೆಯ ಹೊರಗಡೆ ಘನತಾಜ್ಯ ವಸ್ತುಗಳನ್ನು ಎಸೆದರೆ ಅವುಗಳಲ್ಲಿ ನೀರು ನಿಂತು ಸೊಳ್ಳೆ ಸಂತತಿ ಹೆಚ್ಚಾಗುವುರಿಂದ ಸಾರ್ವಜನಿಕರು ಘನ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಮುಂದುವರೆದು ಮಾತನಾಡಿದ ಇವರು ಜಿಲ್ಲೆಯಲ್ಲಿ ಸಂಶಯಾಸ್ಪದ ಪ್ರಕರಣಗಳು ಕಾಣಿಸಿಕೊಂಡರೆ ನಮ್ಮ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಮಾದರಿಗಳನ್ನು ತಪಾಸಣೆ ಮಾಡುವ ಸೌಲಭ್ಯವಿದ್ದು,ಸಾರ್ವಜನಿಕರು ಖಾಸಗಿ ಆಸ್ಪತ್ರಗಳಿಗೆ ಹೋಗಿ ವಿನಾಕಾರಣ ಹಣವನ್ನು ಹಾಳು ಮಾಡಿಕೊಳ್ಳಬಾರದು ಎಂದು ಮನವಿ ಮಾಡುತ್ತಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾದ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಂ.ಕೆ.ಪಾಟೀಲ್  ಈ ಜ್ವರವು ಈಡೀಸ್ ಇಜಿಪ್ಟೈ ಎಂಬ ಸೊಳ್ಳೆಯಿಂದ ಬರುವಂತಹ ವೈರಸ್ ಕಾಯಿಲೆಯಾಗಿದ್ದು,ಸುಮಾರು  ಒಂದು ವಾರಗಳ ಕಾಲ ಸಾಮಾನ್ಯ ಚಿಕಿತ್ಸೆ ಅಂದರೆ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನು ತೆಗೆದುಕೊಂಡರೆ ಸಾಕು ರೋಗಿಯು ಆರಾಮವಾಗುತ್ತಾನೆ ಹೀಗಾಗಿ ಡೆಂಗ್ಯೂ ಜ್ವರವೆಂದರೆ ಭಯಪಡುವ ಅಗತ್ಯವಿಲ್ಲ ಅನವಶ್ಯಕವಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರಗಳಿಗೆ ಹೋಗಿ ದುಡ್ಡು ಸುರಿಯುವ ಅಗತ್ಯವಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ,ಬಸವರಾಜ ಗುಳಗಿ ,ಜಿಲ್ಲಾ ವಿ.ಬಿ.ಡಿ.ಸಿ ಅಧಿಕಾರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಡಾ.ಶರಬಸಪ್ಪ ಗಣಜಲ್‍ಖೇಡ್, ಡಾ.ರಾಜಕುಮಾರ್, ಡಾ.ಶಿವಶರಣಪ್ಪ ಹಾಗೂ ಇನ್ನಿತರ ಕಾರ್ಯಕ್ರಮ ಅಧಿಕಾರಿಗಳು ಮತ್ತು ಚಾಮರಾಜ ದೊಡಮನಿ, ಕಾರ್ಣಿಕ ಕೋರೆ,ಶರಣಬಸಪ್ಪಅರಳಿಮರ, ಚಂದ್ರಕಾಂತ ಏರಿ, ಗಣೇಶ ಚಿನ್ನಾಕಾರ ಹಾಗೂ ಜಿಲ್ಲಾ ನರ್ಸಿಂಗ್ ಶಾಲೆಯ ವಿಧ್ಯಾರ್ಥಿಗಳು ಹಾಗೂ ಉನ್ಯಾಸಕರು, ಇಲಾಖೆಯ  ಎಲ್ಲ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

Leave a Comment