ಡಿಸೆಂಬರ್ ನಲ್ಲಿ ಥರ್ಡ್‍ಕ್ಲಾಸ್ ಚಿತ್ರ ಬಿಡುಗಡೆ

ದಾವಣಗೆರೆ.ನ.18; ಸಾಮಾಜಿಕ ಕಳಕಳಿಯುಳ್ಳ ಥರ್ಡ್ ಕ್ಲಾಸ್ ಚಿತ್ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕನಟ ನಮ್ ಜಗದೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯದ ಬಗ್ಗೆ ಚಿತ್ರಿಸಲಾಗಿದೆ.ಜೆಸ್ಸಿಗಿಫ್ಟ್ ಸಂಗೀತದಲ್ಲಿ ಚಿತ್ರ ಮನೋಜ್ಞವಾಗಿ ಮೂಡಿಬಂದಿದೆ.ಇಂದಿನ ವ್ಯವಸ್ಥೆಯಲ್ಲಿ ಪ್ರೀತಿಸಿದವರು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಯುವಜನತೆಗೆ ಇಷ್ಟವಾಗುವ ಕಥೆ ಥರ್ಡ್ ಕ್ಲಾಸ್ ಚಿತ್ರದಲ್ಲಿದೆ.ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ.ಹಿರಿಯ ಕಲಾವಿದರಾದ ರಮೇಶ್ ಭಟ್, ಅವಿನಾಶ್,ಶರವಣ, ಹರೀಶ್, ಮಜಾಟಾಕೀಸ್ ಪವನ್ ಮತ್ತಿತರರು ನಟಿಸಿದ್ದಾರೆ. ರಾಜ್ಯಾದ್ಯಂತ ಚಿತ್ರಬಿಡುಗಡೆಯ ಮೊದಲಶೋ ಉಚಿತ ಪ್ರದರ್ಶನವಿದೆ. ಚಿತ್ರ ಯಶಸ್ವಿಗೊಂಡು 2 ನೇ ವಾರ ಪ್ರದರ್ಶನಗೊಂಡರೆ ಆ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡುವ ಉದ್ದೇಶವಿದೆ.ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಜನರ ಪ್ರಶಂಸೆ ವ್ಯಕ್ತವಾಗಿರುವುದು ನಮ್ಮಲ್ಲಿ ಭರವಸೆ ಮೂಡಿಸಿದೆ.ಜನರು ಚಿತ್ರ ವೀಕ್ಷಿಸಿ ಹಾರೈಸಬೇಕೆಂದರು.
ನಟಿ ರೂಪಿಕಾ ಮಾತನಾಡಿ ಚಿತ್ರದಲ್ಲಿ ತಂದೆ ಮಗಳ ಬಾಂಧವ್ಯದ ಬೆಸುಗೆಯಿದೆ ಜೊತೆಗೆ ಪ್ರೀತಿಯ ಗಟ್ಟಿತನವಿದೆ. ಸಮಾಜದ 3 ವರ್ಗವಾದ ಶ್ರೀಮಂತರು,ಮಧ್ಯಮ ಹಾಗೂ ಬಡವರ್ಗದ ನಡುವೆ ನಡೆಯುವ ಕಥೆಯೇ ಥರ್ಡ್ ಕ್ಲಾಸ್ ಚಿತ್ರ. ಜನರು ನಮಗೆ ಪ್ರೋತ್ಸಾಹ ನೀಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಬಾಡದ ಆನಂದರಾಜ್,ವಾಣಿ ನಾಗಭೂಷಣ್ ಇದ್ದರು.

Leave a Comment