ಡಿಸಿ ಗ್ರಾಮವಾಸ್ತವ್ಯಕ್ಕೆ ಒತ್ತಾಯಿಸಿ ಮನವಿ

ಕುಂದಗೋಳ,ಫೆ11 :   ಮಾನವನ ಮೂಲ ಸೌಲಭ್ಯಗಳಾದ ಬಸ್, ರಸ್ತೆ, ಹಾಗೂ ಮುಖ್ಯವಾಗಿ ಕುಡಿಯುವ ನೀರು ಗ್ರಾಮದಲ್ಲಿ ಉಲ್ಬಣಿಸುತ್ತಿದ್ದು, ಗ್ರಾಮದಲ್ಲಿ ಜಿಲ್ಲಾಧಿಕಾರಿ ಖುದ್ದು ಗ್ರಾಮವಾಸ್ತವ್ಯ ಮಾಡಲೆಂದು  ಒತ್ತಾಯಿಸಿ ತಾಲೂಕಿನ ಅಲ್ಲಾಪುರ ಗ್ರಾಮಸ್ಥರು ಉಪತಹಶಿಲ್ದಾರ ವಿ.ಎಸ್.ಮುಳಗುಂದಮಠ ಅವರಿಗೆ ಶುಕ್ರವಾರ ಮನವಿ ನೀಡಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಕುಡಿಯುವ ನೀರಿಗೆ ಹಪಹಪಿಸುವಂತಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಪ್ರಯೋಜನವಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನಮ್ಮ ಗ್ರಾಮಕ್ಕೆ ಪೈಪ್‍ಲೈನ್ ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಹಾಗೂ ದನಕರುಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದರೊಂದಿಗೆ ನಮ್ಮ ಗ್ರಾಮದ ಸುತ್ತಲಿನ ರಸ್ತೆ ಸಂಪರ್ಕ ಹಾಳಾಗುತ್ತಿದ್ದು, ನಮ್ಮ ಗ್ರಾಮ ಪಂಚಾಯತ ಕೇಂದ್ರ ಸ್ಥಳ ಗುಡೇನಕಟ್ಟಿಗೆ ಸಂಚರಿಸಲು ಹುಬ್ಬಳ್ಳಿ, ಕುಂದಗೋಳ ಮಾರ್ಗವಾಗಿ ಸುಮಾರು 35 ಕಿ.ಮೀ ದೂರ ಪ್ರಯಾಣಿಸುವಂತಾಗಿದ್ದು, ಅಲ್ಲಾಪುರ ಗ್ರಾಮದಿಂದ ಕೇವಲ 5 ಕಿ.ಮೀ ದೂರದ ಗುಡೇನಕಟ್ಟಿ ರಸ್ತೆ ಸಂಪೂರ್ಣ ಶುದ್ಧರಸ್ತೆಯಾಗಬೇಕು, ಕುಂದಗೋಳ-ಅಲ್ಲಾಪುರ ಕೇವಲ 7 ಕಿ.ಮೀ ಅಂತರವಿದ್ದು, ಇಲ್ಲಿ ಬಸ್ ಸಂಚಾರ ಇಲ್ಲದ್ದರಿಂದ ಕುಂದಗೋಳಕ್ಕೆ ಗಂಟೆಗಟ್ಟಲೇ ಪ್ರಯಾಣಿಸುವಂತಾಗಿದ್ದು, ಕಂಕಣ ಸುತ್ತಿ ಮೈಲಾರಕ್ಕೆ ಬರುವಂತಾಗಿದ್ದರಿಂದ ಸಾರ್ವಜನಿಕರ ವೇಳೆ, ಹಣ ವ್ಯವಾಗುತ್ತಿರುವದರಿಂದ ತಕ್ಷಣ ಬಸ್ ಆರಂಭವಾಗಬೇಕು, ಈ ಎಲ್ಲ ಮೂಲ ಸೌಕರ್ಯಗಳಿಂದ ವಂಚಿತವಾದ ಅಲ್ಲಾಪುರ ಗ್ರಾಮಕ್ಕೆ ಖುದ್ದು ವೀಕ್ಷಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಗ್ರಾಮ ವಾಸ್ತವ್ಯ ಮಾಡಿ ನಮ್ಮ ಗ್ರಾಮದ ಸರ್ವ ಅವ್ಯವ್ಯವಸ್ಥೆಯನ್ನು ಸರಿಪಡಿಸುವಂತಾಗಲಿ ಎಂದು ಗ್ರಾಮಸ್ಥರು ಮನವಿಯಲ್ಲಿ ವಿವರಿಸಿದ್ದಾರೆ.
ಎಚ್.ಸಿ.ಮ್ಯಾಗೇರಿ, ಎಂ.ಎಸ್.ಮುರಾರಿ, ಡಿ.ಜಿ.ಗೋಪಾಳಿ, ಮಲ್ಲಿಕಾರ್ಜುನ ರಡ್ಡೇರ, ಐ.ಡಿ.ನಾಗಶೆಟ್ಟಿಕೊಪ್ಪ, ಗೋವಿಂದ ದೊಡ್ಡೂರ, ಬಸವಣ್ಣೆಪ್ಪ ರಡ್ಡೇರ ಸೇರಿದಂತೆ ಅನೇಕರಿದ್ದರು.

Leave a Comment