ಡಿಸಿಬಿ ದಾಳಿ: ಜೂಜಾಟ ನಿರತ 14 ಜನರ ಬಂಧನ

ಕಲಬುರಗಿ,ಸೆ.11- ನಗರದ ಎರಡು ಕಡೆ ಪ್ರತ್ಯೇಕ ದಾಳಿ ಮಾಡಿದ ಡಿಸಿಬಿ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿ ಅವರಿಂದ 79,280 ರೂ.ಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಬಸವೇಶ್ವರ ಕಾಲೋನಿ ಮತ್ತು ಶಹಬಜಾರ ಚೌದಾಪೂರಿ ಮಠದ ಬಳಿ ಪ್ರತ್ಯೇಕವಾಗು ದಾಳಿ ಮಾಡಿದ ಡಿಸಿಬಿ ಪೊಲೀಸರ ತಂಡಗಳು, ಇಸ್ಪೆಟ್ ಆಟ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿದ್ದಾರೆ.

ಎಸ್ಪಿ ಶಶಿಕುಮಾರ ಎನ್, ಅಪರ ಎಸ್ಪಿ ಜಯಪ್ರಕಾಶ, ಡಿಎಸ್‍ಪಿ-ಎಸ್‍ಎಸ್ ಹುಲ್ಲೂರ ಮಾರ್ಗದರ್ಶನದಲ್ಲಿ ಡಿಸಿಬಿ ಘಟಕದ ಕಪಿಲದೇವ ಪಿಐ, ಸಂಗಮನಾಥ ಚೌಕ ಪಿಐ, ಎಂ.ಬಿ ನಗರ ಪಿಎಸ್‍ಐ ಶರಣಬಸಪ್ಪಾ ಕೊಡ್ಲಾ, ಡಿಸಿಬಿ ಸಿಬ್ಬಂದಿಗಳಾದ ದೇವಿಂದ್ರ, ಅಶೋಕ, ಶಿವಪ್ರಕಾಶ, ರಾಮು ಪವಾರ, ರೇವಣಸಿದ್ದ, ಸುರೇಶ ಅವರನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳು ದಾಳಿ ಮಾಡಿದೆ. ಈ ಕುರಿತು ಎಂ.ಬಿ.ನಗರ ಮತ್ತು ಚೌಕ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Leave a Comment