ಡಿವೈಡರ್ ಹಾರಿದ ಕಾರ್

ಹಳೆಯಂಗಡಿ, ಮಾ.೨೦- ಇಲ್ಲಿನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿನ ಪಾವಂಜೆ ಸಮೀಪ ಹಳೆಯಂಗಡಿಯತ್ತ ತೆರಳುತ್ತಿದ್ದ ಮಾರುತಿ ಕಾರ್ ಚಾಲಕನ ನಿರ್ಲಕ್ಷದಿಂದ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೂರು ಪಲ್ಟಿಯಾಗಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೂಲ್ಕಿಯಿಂದ ಮಂಗಳೂರಿನಿಂದ ಬರುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೇರಿ ನಿಂತ ಘಟನೆ ನಿನ್ನೆ ರಾತ್ರಿ ನಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಕಾರಿನ ಚಾಲಕ ಹಳೆಯಂಗಡಿ ಇಂದಿರಾ ನಗರ ನಿವಾಸಿ ಫೈಝಲ್ ಮತ್ತು ಸಹಸವಾರ ಶಿಫಾನ್ ಎಂದು ಗುರುತಿಸಲಾಗಿದೆ ಇವರಲ್ಲಿ ಫೈಝಲ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೇ, ಶಿಫಾನ್‌ನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ರವಿ ಎಂಬುವವರಿಗೂ ಗಾಯವಾಗಿದೆ. ಅಪಘಾತ ನಡೆದ ತಕ್ಷಣ ಸುರತ್ಕಲ್ ಸಂಚಾರಿ ಪೊಲೀಸರು ಸಂಚಾರ ಒತ್ತಡವನ್ನು ತೆರವು ಮಾಡಿದರು. ಅಪಘಾತ ನಡೆದ ಸ್ಥಳದಲ್ಲಿ ದಾರಿದೀಪಗಳಿಲ್ಲದೇ ಇರುವುದು ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

Leave a Comment