ಡಿವೈಎಸ್‌ಪಿಯಾದ ಮಗಳು ಜಾನಕಿ ಪ್ರೇಕ್ಷಕರಲ್ಲಿ ಹೆಚ್ಚಾದ ಕೌತುಕ

ಕಿರುತೆರೆಯ ಕಲರ್‍ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿರುವ ಮಗಳು ಜಾನಕಿ ಧಾರವಾಹಿಯ ಹೊಸ ಅಧ್ಯಾಯ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಪ್ರೇಕ್ಷಕರನ್ನು ಕಟ್ಟಿ ಹಾಕಿರುವ ಮಗಳು ಜಾನಕಿ…. ಪೋಲಿಸ್ ಅಧಿಕಾರಿಯಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬುದು ತೀವ್ರ ಕೌತುಕಕ್ಕೆ ಕಾರಣವಾಗಿದೆ.

ಧಾರವಾಹಿಯಲ್ಲಿ ಪಾತ್ರಧಾರಿಗಳ ಉನ್ನತ ಸ್ಥಾನಕ್ಕೀರಿದ್ದು,  ಹೊಸ ಹುಮ್ಮಸ್ಸಿನಲ್ಲಿದ್ದಾರೆ, ಆದರೆ ನಿರಂಜನ್ ಮಾತ್ರ ಮತ್ತೆ ಅದೇ ನಷ್ಟದಲ್ಲಿ ಸಂಸ್ಥೆ ನಡೆಸುತ್ತಿದ್ದಾರೆ.

ಬೇರೆ ಧಾರಾವಹಿಗಳಲ್ಲಿ ಎಳೆದು ಎಳೆದು ತೋರಿಸುವಂತೆ ಇಲ್ಲಿ ಕಥೆ ಎಣೆಯದೇ ನೇರವಾಗಿ ಬಹುಮುಖ್ಯ ಕಥೆಯ ಭಾಗಕ್ಕೆ ಧಾರವಾಹಿ ಎಂಟ್ರಿ ಕೊಟ್ಟಿರುವುದು ಪ್ರೇಕ್ಷಕರಿಗೆ ಬಹಳ ಖಷಿಕೊಟ್ಟಿದೆ.

janaki4

ಡಿವೈಎಸ್‌ಪಿಯಾಗಿ ಅಧಿಕಾರಿ ಸ್ವೀಕರಿಸುವ ಮೊದಲು ತಂದೆಯನ್ನ ಭೇಟಿ ಮಾಡಿದ ಜಾನಕಿ ತಂದೆ ವಿರುದ್ಧವೇ ಹೇಗೆ ಕರ್ತವ್ಯ ನಿರ್ವಹಿಸುವುದು  ಧಾರವಾಹಿಯ ಮುಖ್ಯ ಘಟಕವಾಗಿದೆ.ಸುಮಾರು ೨೨೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವ ಮಗಳು ಜಾನಕಿ ಈಗ ಹೊಸ ರೂಪದಲ್ಲಿ ಪ್ರಸಾರವಾಗುತ್ತಿದೆ. ಅಂದರೆ ಇಷ್ಟು ದಿನಗಳ ಕಾಲ ಅಳುಮುಂಜಿಯಾಗಿದ್ದ ಮಗಳು ಜಾನಕಿ ಈಗ ಡಿ ವೈ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪರೀಕ್ಷೆಗೆ ತಯಾರಾಗುತ್ತಿದ್ದ ಜಾನಕಿ ದಿಢೀರನೆ ಡಿ ವೈ ಎಸ್ ಪಿ ಆಗಿದ್ದಾಳೆ ಎಂದು ಅಚ್ಚರಿ ಪಡಬೇಡಿ. ಮಧ್ಯದಲ್ಲಿ ಏನೆಲ್ಲ ನಡೆದು ಹೋಗಿದೆ ಎನ್ನುವುದನ್ನು ತೋರಿಸುತ್ತಾ ಹೋದರೆ ಪ್ರೇಕ್ಷಕರಿಗೆ ಬೋರ್ ಆಗಬಹುದು ಎನ್ನುವ ಉದ್ದೇಶದಿಂದ, ಜಾನಕಿ ಪರೀಕ್ಷೆ ಬರೆದು ನಂತರ ಪಾಸಾಗಿ, ಟ್ರೈನಿಂಗ್ ಪಡೆದು ಈಗ ಡಿವೈಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿರುವ ಬಗ್ಗೆ ವಿವರಿಸಿ, ಉಳಿದ ಪಾತ್ರಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ. ಇದ್ದರಿಂದ ಖಡಾಕ್ ಅಧಿಕಾರಿ ಜಾನಕಿಯನ್ನು ಇನ್ನು ಯಾವಾಗ ನೋಡುತ್ತೇವೆ ಅಂದಕೊಂಡವರಿಗೆ ಬಹಳ ಸಂತಸವಾಗಿದೆ. ನಿರ್ದೇಶಕರ ಈ ನಡೆ ನಿಜಕ್ಕೂ ಅದ್ಧುತ ಎಂದು ಜನರು ವರ್ಣಿಸಿದ್ದಾರೆ. ಹೊಸ ಅಧ್ಯಾಯದಲ್ಲಿ ಜಾನಕಿ ಮಾಜಿ ಪ್ರಿಯಕರ ಆನಂದ್ ಬೆಳಗೂರು ಕೈ ಕೆಳಗೆ ಕೆಲಸ ಮಾಡಬೇಕಾಗಿದೆ.

janaki2ಮಣಿಘಟ್ಟದ ಡಿವೈಎಸ್‌ಪಿ

ಈಗ ಪ್ರಾರಂಭವಾಗಿದೆ ಮಗಳು ಜಾನಕಿ ಧಾರಾವಾಹಿಯ ನಿಜವಾದ ಕತೆ. ಜಾನಕಿ ಪರೀಕ್ಷೆಯಲ್ಲಿ ಮೂರನೆ ರ್‍ಯಾಂಕ್ ಪಡೆದ ಜಾನಕಿ ಮಣಿಘಟ್ಟದ ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪೊಲೀಸ್ ಆಗಿ ಬಂದ ಜಾನಕಿಯನ್ನು ನೋಡಿ ಭಾರ್ಗಿ ಒಳಗೊಳಗೆ ಸಿಟ್ಟಿಗೇಳುತ್ತಿದ್ದಾರೆ. ಖಾಕಿ ಧರಿಸಿದ ಮಗಳು ಅಪ್ಪನನ್ನು ಸರ್ ಅಂತಾನೆ ಕರೆಯುತ್ತಿರುವುದ್ದನ್ನು ನೋಡಿ ಕೆಂಡಕಾರುತ್ತಿದ್ದಾರೆ. ತಂದೆ ನೀಡುವ ನೆರವನ್ನು ಜಾನಕಿ ಸರಾಗವಾಗಿ ತಳ್ಳಿ ಹಾಕಿದ್ದಾರೆ.  ಇಷ್ಟು ದಿನ ಜಾನಕಿ ಸೀರೆ ತೊಟ್ಟು ಪಕ್ಕಾ ಗೃಹಿಣಿಯಾಗಿ, ಅಳುಮುಂಜಿ ಜಾನಕಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಜಾನಕಿ ಬದಲಾಗಿದ್ದಾರೆ. ಜಾನಕಿ ಲೆವೆಲ್ ಬದಲಾಗಿದೆ, ಜಾನಕಿ ಈಗ ಪೋಲಿಸ್ ಅಧಿಕಾರಿಯಾಗಿ ಎಂಟ್ರಿ ಕೊಡಲಿದ್ದಾರೆ. ಬುಲೆಟ್ ಏರಿ ಬರುವ ಜಾನಕಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾನಕಿ ಕನಸು ನನಸಾಗುವ ಸಮಯ ಹತ್ತಿರ ಬಂದಿದ್ದು, ಜಾನಕಿಯನ್ನು ಕಂಡು ಪ್ರೇಕ್ಷಕರು ತಾವೇ  ಪೋಲಿಸ್ ಆದ್ದಂತೆ ಸಂಭ್ರಮಿಸಿದ್ದಾರೆ.

ಮನೆಗೆ ಬಂದ ಜಾನಕಿ

ಪೋಲಿಸ್ ಅಧಿಕಾರಿಯಾಗಿ ಚಾರ್ಚ್ ತೆಗೆದುಕೊಂಡ ಬಳಿಕ ಮನೆ ಬಂದ ಜಾನಕಿಯನ್ನು ತಂದೆ ಚಂದು ಬಾರ್ಗಿ ಮಾತನಾಡಿಸದೇ ಹೋದಾಗ ಬೇಸರಗೊಂಡ ಜಾನಕಿ ಅಪ್ಪನ ಬಳಿ ಹೋಗಿ ತನ್ನ ಯಾತಕ್ಕಾಗಿ ಅವರ ನೆರವನ್ನು ತಿರಸ್ಕರಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರೋಚಕ ತಿರುವು

ಇನ್ನು ಧಾರವಾಹಿಯಲ್ಲಿ  ಜಾನಕಿ ಪತಿ ನಿರಂಜನ್ ಇನ್ನು ಕಷ್ಟದಲ್ಲೆ ಜೀವನ ನಡೆಸುತ್ತಿದ್ದಾರೆ. ಚಿರಂತನ್ ಚೌಧರಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನಿರಂಜನ್ ನಷ್ಟದಲ್ಲಿದ್ದಾರೆ. ಮತ್ತೊಂದೆಡೆ ಸಿ ಎಸ್ ಪಿ ಮಗ ಮಧುಕರ ದೊಡ್ಡ ಕ್ರಿಮಿನಲ್ ಲಾಯರ್ ಆಗಿದ್ದಾರೆ. ಮಗ ಮನೆ ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿರುವ ದುಃಖ ತಂದೆ ಸಿ ಎಸ್ ಪಿ ಅವರನ್ನು ಕಾಡುತ್ತಿದ್ದರೆ, ಮಧುಕರ್ ದೊಡ್ಡ ಲಾಯರ್ ಆಗಿರುವ ಸಂತಸ ಕೂಡ ಇದೆ. ಇನ್ನು ಮದುವೆ ಆಗದ ಚಂಚಲ ಮತ್ತು ಚಿರಂತನ್ ಭಾರ್ಗಿ ಎರಡನೆ ಪುತ್ರಿ ಚಂಚಲ ಮತ್ತು ಮಾಜಿ ಗೃಹ ಸಚಿವರ ಪುತ್ರ ಚಿರಂತನ್ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಆದ್ರೆ ಭಾರ್ಗಿ ಮತ್ತು ಚಿರಂತನ್ ತಂದೆ ಅವರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬಗೆ ಆಗಲ್ಲ. ಹಾಗಾಗಿ ಚಿರಂತನ್ ಮನೆಯಲ್ಲಿ ಚಂಚಲರನ್ನ ಸೊಸೆ ಮಾಡಿಕೊಳ್ಳಲು ಒಪ್ಪಿಗೆ ನೀಡಿಲ್ಲ. ಇಬ್ಬರ ಪ್ರೇಮ್ ಕಹಾನಿ ಎಲ್ಲಿಗೆ ಹೋಗಿ ಮುಟ್ಟುತ್ತೊ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಮಗಳು ಜಾನಕಿ, ಸಿಎಸ್‌ಪಿ, ಚಂದು ಬಾರ್ಗಿ, ಮಧುಕರ, ನಿರಂಜನ್, ಚಂಚಲ, ರಶ್ಮಿ ಇನ್ನು ಮುಖ್ಯ ಪಾತ್ರಗಳ ನಡುವೆ ಇನ್ನು ಮುಂದೆ ರೋಚಕ ತಿರುವುಗಳು ಪಡೆದುಕೊಳ್ಳಲಿದೆ.

Leave a Comment