ಡಿವಿಲಿಯರ್ಸ್‌ ವಿಶ್ವಕಪ್‌ ಆಡುವ ಪ್ರಸ್ತಾಪ ತುಂಬಾ ತಡವಾಗಿತ್ತು : ಡುಪ್ಲೇಸಿಸ್‌

ಸೌಥ್‌ಹ್ಯಾಮ್ಟನ್‌, ಜೂ 11 – ಪ್ರಸ್ತುತ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ರಾಷ್ಟ್ರೀಯ ತಂಡಕ್ಕೆ ಮರಳುವ ಕುರಿತು ಎ.ಬಿ ಡಿವಿಲಿಯರ್ಸ್ ಅವರು ತಂಡ ಅಂತಿಮವಾದ ಕೊನೆಯ ಗಳಿಗೆಯಲ್ಲಿ ಪ್ರಸ್ತಾಪ ಮಾಡಿದ್ದರು ಎಂದು ದಕ್ಷಿಣ ಆಫ್ರಿಕಾ ನಾಯಕ ಪಾಫ್‌ ಡುಪ್ಲೇಸಿಸ್‌ ತಡವಾಗಿ ಬಹಿರಂಗ ಪಡೆಸಿದ್ದಾರೆ.

ಸೋಮವಾರ ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಈ ವಿಷಯವನ್ನು ಬಹಿರಂಗ ಪಡಿಸಿದ ಡುಪ್ಲೇಸಿಸ್‌, ಕಳೆದ ಆವೃತ್ತಿಯ ಐಪಿಲ್‌ ಟೂರ್ನಿ ವೇಳೆ ಫೋನ್‌ ಕರೆಯಲ್ಲಿ ಡಿವಿಲಿಯರ್ಸ್‌ ಬಳಿ ವಿಶ್ವಕಪ್‌ ರಾಷ್ಟ್ರೀಯ ತಂಡ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದೆ.

“ವಿಶ್ವಕಪ್‌ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನುಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ದಿನದ ರಾತ್ರಿ ಡಿವಿಲಿಯರ್ಸ್‌ ಬಳಿ ಸಾಮಾನ್ಯವಾಗಿ ಮಾತನಾಡಿದ್ದೆ. ತಂಡದ ಆಯ್ಕೆ ಕುರಿತಂತೆ ಅವರ ಬಳಿ ಚರ್ಚೆ ನಡೆಸಿದ್ದೆ” ಎಂದು ಹೇಳಿದರು.

“ಡಿವಿಲಿಯರ್ಸ್‌ ವಿಶ್ವಕಪ್‌ ಆಡುವ ಬಗ್ಗೆ ಪ್ರಸ್ತಾಪ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ನಾನು, ” ಮುಖ್ಯ ತರಬೇತುದಾರ ಹಾಗೂ ಆಯ್ಕೆ ಸಮಿತಿ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಕೋಚ್‌ ಹಾಗೂ ಆಯ್ಕೆದಾರರ ಬಳಿ ಮಾತನಾಡಿದಾಗ “ಈಗಾಗಲೇ ತಂಡವನ್ನು ಅಂತಿಮಗೊಳಿಸಲಾಗಿದೆ. ಡಿವಿಲಿಯರ್ಸ್‌ ಅವರ ಪ್ರಸ್ತಾಪ ತುಂಬಾ ತಡವಾಗಿದೆ. ತಂಡವನ್ನು ಬದಲಾಯಿಸುವುದು ಶೇ 99.99 ರಷ್ಟು ಸಾಧ್ಯವಿಲ್ಲ” ಎಂದು ಹೇಳಿದ್ದರು ಎಂದು ಫಾಫ್‌ ತಿಳಿಸಿದರು.

ಕಳೆದ ಮೇ. ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡವನ್ನು ಪ್ರಕಟಿಸಿದ ಮರುದಿನವೇ ಡಿವಿಲಿಯರ್ಸ್‌ ಅವರು ತಂಡಕ್ಕೆ ಮರುಳುವ ಪ್ರಸ್ತಾಪವಿಟ್ಟಿದ್ದರು ಎಂದು ಇಎಸ್‌ಪಿನ್‌ ಕಳೆದ ವಾರ ಬಹಿರಂಗ ಪಡಿಸಿತ್ತು.

ಆ ವರದಿ ಪ್ರಕಾರ “ಡಿವಿಲಿಯರ್ಸ್‌ ಅವರು ತಂಡದ ನಾಯಕ ಫಾಫ್‌ ಡುಪ್ಲೇಸಿಸ್‌, ಮುಖ್ಯ ತರಬೇತುದಾರ ಒಟ್ಟಿಸ್‌ ಗಿಬ್ಸನ್‌ ಹಾಗೂ ಆಯ್ಕೆ ಸಮಿತಿಯ ಲಿಂಡಾ ಜೊಂಡಿ ಅವರ ವಿಶ್ವಕಪ್‌ ಆಡುವುದಾಗಿ ಇಂಗಿತ ವ್ಯಕ್ತಪಡಿದ್ದರು. ಆದರೆ, ಅವರು ಡಿವಿಲಿಯರ್ಸ್‌ ಅವರ ಪ್ರಸ್ತಾಪವನ್ನು ನಿರಾಕರಿಸಿದ್ದರು ಎಂದು ತಿಳಿಸಿದೆ.

ಪ್ರಸ್ತುತ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ತೋರುತ್ತಿದೆ. ಹಾಗಾಗಿ, ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದರೆ, ಸೋಮವಾರ ವೆಸ್ಟ್‌ ಇಂಡೀಸ್‌ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು.

“ಡಿವಿಲಿಯರ್ಸ್ ತಂಡದ ಮರಳುವಿಕೆಯ ಪ್ರಸ್ತಾಪ ಹಾಗೂ ತಂಡದ ಬಗೆಗಿನ ತೆಲಾಡುತ್ತಿರುವ ಸಂಗತಿಗಳ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಈ ವಿಷಯ ಇದೀಗ ಬಹಿರಂಗ ಪಡಿಸಿದೆ” ಎಂದು ಡುಪ್ಲೇಸಿಸ್‌ ಸ್ಪಷ್ಟಪಡಿಸಿದರು.

 

Leave a Comment