ಡಿವಿಎಸ್ ವಾಹನ ತಪಾಸಣೆ

ಬೆಂಗಳೂರು, ಏ.೧೫- ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರ ವಾಹನವನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ನಗರದ ಮಾಗಡಿ ರಸ್ತೆಯ ದೊಡ್ಡಗೊಲ್ಲರಹಟ್ಟಿ ಬಳಿ ಸದಾನಂದಗೌಡರ ಕಾರು ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ತಡೆದು ನಿಲ್ಲಿಸಿ ತಪಾಸಣೆ ಮಾಡಿದರು. ಆಯೋಗದ ಸಿಬ್ಬಂದಿಗಳು ಕಾರು ತಡೆಯುತ್ತಿದ್ದಂತೆ ಕೆಳಗಿಳಿದ ಸದಾನಂದಗೌಡರು ತಪಾಸಣೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದರು.
ವಾಹನ ತಪಾಸಣೆ ಬಳಿಕ ಅವರು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಕ್ಷೇತ್ರದತ್ತ ತೆರಳಿದರು.

Leave a Comment