ಡಿಯರ್ ಕಾಮ್ರೇಡ್’ ಮ್ಯೂಸಿಕ್ ಫೆಸ್ಟಿವಲ್

ಬೆಂಗಳೂರು, ಜುಲೈ 13 -ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ’ಡಿಯರ್ ಕಾಮ್ರೇಡ್’ ಸಿನಿಮಾ ಇದೇ ಜುಲೈ 26 ರಂದು ಬಿಡುಗಡೆಯಾಗುತ್ತಿದೆ ಚಿತ್ರವು ಅದ್ಭುತ ಸಂಗೀತವನ್ನು ಒಳಗೊಂಡಿದೆ ಹೀಗಾಗಿ ಪ್ರಮೋಷನ್ ಉದ್ದೇಶದಿಂದ ಬೆಂಗಳೂರಿನ ಸೇಂಟ್ ಜಾನ್ ಆಡಿಟೋರಿಯಂ ನಲ್ಲಿ ಶುಕ್ರವಾರ ’ಮ್ಯೂಸಿಕಲ್ ಫೆಸ್ಟಿವಲ್’ ಆರಂಭಿಸಿದ್ದು, ನಟ ಯಶ್ ಚಾಲನೆ ನೀಡಿದ್ದಾರೆ ಅಲ್ಲದೆ ಯಶ್, ವಿಜಯ್ ದೇವರಕೊಂಡ ಕುಣಿದು ಕುಪ್ಪಳಿಸಿ, ಅಭಿಮಾನಿಗಳನ್ನು ರಂಜಿಸಿದ್ದಾರೆ
“ಈ ಚಿತ್ರವು ನಮ್ಮೆಲ್ಲರಿಗೂ ವೈಯಕ್ತಿಕ ನೆನಪನ್ನು ತರಲಿದೆ. ಡಿಯರ್ ಕಾಮ್ರೇಡ್‌ ಅದ್ಭುತ ಸಂಗೀತವನ್ನು ಒಳಗೊಂಡಿದೆ. ನಾವು ನಮ್ಮ ಜತೆಗಿರುವ ಜನರೊಡನೆ ಆಚರಿಸಲು ಬಯಸುತ್ತೇವೆ” ಎಂದು ನಟ ವಿಜಯ್ ಹೇಳಿದ್ದಾರೆ.
ಭರತ್ ಕಮ್ಮ ನಿರ್ದೇಶನದ ಈ ಚಿತ್ರದ ಕನ್ನಡ ಟ್ರೇಲರ್ ಬಿಡುಗಡೆಯಾಗಿದೆ. ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಏಕಕಾಲದಲ್ಲಿ ಡಬ್ ಮಾಡಿ ಇತರ ಮೂರು ದಕ್ಷಿಣ ಭಾರತದ ಭಾಷೆಗಳಾದ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ತರುವುದಾಗಿ ಚಿತ್ರತಂಡ ತಿಳಿಸಿದೆ. “ಈ ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಲಾಗುವುದಿಲ್ಲ. . ಕಾರಣ, ಡಿಯರ್ ಕಾಮ್ರೆಡ್ ಭೌಗೋಳಿಕತೆ ಮತ್ತು ಸಂಸ್ಕೃತಿಯ ಕಾರಣದಿಂದಾಗಿ ದಕ್ಷಿಣ ಭಾರತಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ನಾನು ನಂಬುತ್ತೇನೆ. ಈ ಚಿತ್ರವು ಒಂದು ಸಣ್ಣ ಪಟ್ಟಣ ಹಾಗೂ ನಗರದ ಜೀವನವನ್ನು ಒಳಗೊಂಡಿದೆ. ಇದು ದಕ್ಷಿಣ ಭಾರತದ ಸಂಸ್ಕೃತಿಗೆ ಹೆಚ್ಚು ಸೂಕ್ತವಾಗಿದೆ. ” ಎಂದು ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.
ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಗಾಗಿ ರಶ್ಮಿಕಾ ಸ್ವತಃ ಡಬ್ ಮಾಡಿದ್ದಾರೆ. ಕನ್ನಡ ಆವೃತ್ತಿಗೆ ಸ್ವತಃ ಡಬ್ ಮಾಡಿದ್ದಕ್ಕೆ ಸಂತೋಷವಾಗಿದೆ ಕರ್ನಾಟಕದ ನನ್ನ ಎಲ್ಲ ಅಭಿಮಾನಿಗಳಿಗೆ ಬೆಳ್ಳಿ ಪರದೆ ಮೇಲೆ ಇನ್ನೊಮ್ಮೆ ನನ್ನನ್ನು ನೋಡುವ ಅವಕಾಶವಿದೆ. ಇದು ನನ್ನಿಂದ ಅವರಿಗೆ ಮತ್ತೊಂದು ಕನ್ನಡ ಚಿತ್ರವೆಂದು ನಾನು ಭಾವಿಸುತ್ತೇನೆ. ಡಿಯರ್ ಕಾಮ್ರೇಡ್ ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ಚಿತ್ರ, ಮತ್ತು ಅದು ಕನ್ನಡದಲ್ಲೂ ಹೊಂದಲು ನನಗೆ ಸಂತೋಷವಾಗಿದೆ. ” ಎಂದು ರಶ್ಮಿಕಾ ಹೇಳಿದ್ದಾರೆ.

Leave a Comment