‘ಡಿಯರ್ ಕಾಮ್ರೇಡ್’ ಗೆ ಕನ್ನಡ ಪರ ಸಂಘಟನೆಗಳ ವಿರೋಧ

ಬೆಂಗಳೂರು, ಜುಲೈ 26 – ನಿರ್ದೇಶಕ ಭರತ್ ಕಮ್ಮ ಸಾರಥ್ಯದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’ ಡಬ್ಬಿಂಗ್ ಚಿತ್ರಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು   ಮೇನಕ ಚಿತ್ರಮಂದಿರದ ಬಳಿ ಶುಕ್ರವಾರ ಬಿಡುಗಡೆಗೆ ಅಡ್ಡಿಯಾಯಿತು

ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಅವಶ್ಯಕತೆಯಿಲ್ಲ ಹಾಗೂ ಕನ್ನಡದವರಾಗಿ ‘ಕನ್ನಡ ಗೊತ್ತಿಲ್ಲ’ ಎಂಬ ರಶ್ಮಿಕಾ ಮಂದಣ್ಣ ನಟನೆಯ ಚಿತ್ರವಾದ್ದರಿಂದ ಬಿಡುಗಡೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು

ಕೊನೆಗೆ, ಪೊಲೀಸರ ಮಧ್ಯಪ್ರವೇಶ, ಚಿತ್ರಮಂದಿರದ ಮಾಲೀಕರು, ವಿತರಕರ ಮನವಿ ಹಾಗೂ ಮನವೊಲಿಕೆಯ ನಂತರ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು

ತೆಲುಗು ಚಿತ್ರವನ್ನು ತಮಿಳು ಹಾಗೂ ಕನ್ನಡ ಭಾಷೆಗೆ ಡಬ್ ಮಾಡಲಾಗಿದ್ದು, ಶುಕ್ರವಾರ  ಬೆಂಗಳೂರಿನ ಹಲವು ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಿದೆ

  ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಕೆಲ ದಿನಗಳ ಹಿಂದೆ ವೆಬ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡ ಮಾತನಾಡಲು ಬರಲ್ಲ, ಕನ್ನಡ ತುಂಬ ಕಷ್ಟ ಎಂದು ಹೇಳಿದ್ದೇ, ಡಬ್ಬಿಂಗ್ ಚಿತ್ರ ಬಿಡುಗಡೆಗೆ ವಿರೋಧ ಹಾಗೂ ರಶ್ಮಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಾತ್ಮಕ ಟೀಕೆ ವ್ಯಕ್ತವಾಗಲು ಕಾರಣವಾಗಿದೆ

 ಕಿರಿಕ್ ಬೆಡಗಿಯನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆ ಆಗ್ರಹಿಸಿದೆ. ಕನ್ನಡ ಮಾತನಾಡಲು ಬರಲ್ಲ, ತುಂಬ ಕಷ್ಟ ಎಂದು ಹೇಳಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ರಶ್ಮಿಕಾ ವಿರುದ್ಧ ಗರಂ ಆಗಿದ್ದಾರೆ.

 ಕನ್ನಡ ಎಂದರೆ ಕಷ್ಟ ಎಂದು ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದಲ್ಲದೆ, ಕನ್ನಡಕ್ಕೆ ಅಗೌರವ ನೀಡಿದ್ದಂತೆ ಹಾಗಾಗಿ ಅವರ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್ ದೂರು ಸಲ್ಲಿಸಿದ್ದರು.

 ರಶ್ಮಿಕಾ ಮಂದಣ್ಣ ಸಿನಿಮಾಗಳು ಮುಂದೆ ಕರ್ನಾಟಕದಲ್ಲಿ ಬಿಡುಗಡೆಯಾದರೆ, ಕರ್ನಾಟಕ ಸಂಘಟನೆಗಳ ಒಕ್ಕೂಟ ಚಿತ್ರ ತಡೆಹಿಡಿದು ಪ್ರತಿಭಟನೆ ಮಾಡಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ರಶ್ಮಿಕಾ ಸಿನಿಮಾ ರಿಲೀಸ್ ಆಗದಂತೆ ತಡೆಹಿಡಿಯಬೇಕೆಂದು ಫಿಲ್ಮ್ ಚೇಂಬರ್ ಗೆ ಮನವಿ ಮಾಡಿದ್ದರು

 ಅಲ್ಲದೆ ರಶ್ಮಿಕಾ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸಂಘದ ಕಾರ್ಯಕರ್ತರು ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಪ್ರತಿಭಟನೆ ನಡೆಸಿದೆ. ರಶ್ಮಿಕಾ ವಿರುದ್ಧ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು ಕನ್ನಡ ಕಲಿಯದಿದ್ದರೆ ನಾವು ವರ್ಣಮಾಲೆ ಕಲಿಸುತ್ತೇವೆ ಎಂದು ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Leave a Comment