ಡಿಪ್ಲೊಮ ಪ್ರವೇಶಕ್ಕೆ ಆಫ್‍ಲೈನ್ ಅರ್ಜಿ ಆಹ್ವಾನ

ದಾವಣಗೆರೆ.ಆ.6;   2019-20 ನೇಸಾಲಿಗೆ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಡಿಪ್ಲೊಮ ಪ್ರವೇಶಕ್ಕೆ ಖಾಲಿ ಉಳಿದಿರುವ ಸೀಟುಗಳಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ಆ.13 ರ ಸಂಜೆ 5.30 ರೊಳಗೆ ಆಯಾ ಕಾಲೇಜುಗಳಲ್ಲಿ ಸಲ್ಲಿಸಬೇಕು. ಆ.14 ರಂದು ಮೆರಿಟ್ ಪಟ್ಟಿ ಹಾಗೂ ಸೀಟು ಹಂಚಿಕೆ ಮಾಡಲಾಗುವುದು ಎಂದು ಡಿ.ಆರ್.ಆರ್. ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment