ಡಿಜಿಟಲ್ ತಂತ್ರಜ್ಞಾನದತ್ತ ಮಲ್ಲಿಗೆ ನಗರಿ

ಮೈಸೂರು, ಆ.7- ಮುಂದಿನ ಅಕ್ಟೋಬರ್ ತಿಂಗಳು ನಡೆಯಲಿರುವ ದಸರಾ ಮಹೋತ್ಸವ ಸಂದರ್ಭದಲ್ಲಿ ನಗರಾದ್ಯಂತ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಗರ ಸಂಚಾರಿ ಪೊಲೀಸರು ಹಾಗೂ ಮಹಾನಗರ ಪಾಲಿಕೆಯವರು ಜಂಟಿಯಾಗಿ ಸಮೀಕ್ಷೆ ನಡೆಸಿ ನಗರದ 4 ಕಡೆಗಳಲ್ಲಿ ಡಿಜಿಟಲ್ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಅನ್ನು ಅಳವಡಿಸಿದ್ದಾರೆ.
ಡಿಜಿಟಲ್ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಯನ್ನು ಅಳವಡಿಸಿರುವುದರಿಂದ ಟ್ರಾಫಿಕ್ ಜಾಮ್, ಲಘು ಹಾಗೂ ಭಾರೀ ವಾಹನಗಳ ವೇಗದ ಮಿತಿ ಮತ್ತು ಮಾರ್ಗಗಳ ಬಗ್ಗೆ ಚಾಲಕರಿಗೆ ಮಾಹಿತಿ ಲಭ್ಯವಾಗಲಿದೆ. ನಗರದ ಬೆಂಗಳೂರು – ಮೈಸೂರು ರಿಂಗ್ ರಸ್ತೆ, ಮೈಸೂರು- ನಂಜನಗೂಡು ಮುಖ್ಯರಸ್ತೆ, ಜಯಚಾಮರಾಜೇಂದ್ರ ವೃತ್ತದ ಬಳಿ ಹಾಗೂ ಬಲ್ಲಾಳ್ ವೃತ್ತದ ಬಳಿ ಈ ಡಿಸ್ ಪ್ಲೇ ಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ.

Leave a Comment