ಡಿಕೆಶಿ ಬೆನ್ನತ್ತಿರುವ ಜಾರಿ, ನಿರ್ದೇಶನಾಲಯ

ಬೆಂಗಳೂರು, ಸೆ. ೧೩- ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮನೆ ಮೇಲೆ ನಡೆಸಿದ ದಾಳಿ ಬೆನ್ನಲ್ಲೆ ಜಾರಿ ನಿರ್ದೇಶನಾಲಯವೂ ತನಿಖೆಗೆ ಮುಂದಾಗಿದೆ.
ಈ ಸಂಬಂಧ ಜಾರಿ ನಿರ್ದೇಶನಾಲಯದಿಂದ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಬಂದಿದ್ದು, ನೋಟಿಸ್ ನೀಡುವ ಸಾಧ್ಯತೆ ಇದೆ.
ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವ ಶಿವಕುಮಾರ್, ಜಾರಿ ನಿರ್ದೇಶನಾಲಯದಿಂದ ತಮಗೆ ದೂರವಾಣಿ ಕರೆ ಬಂದಿರುವುದು ನಿಜ ಎಂದು ಹೇಳಿದ್ದಾರೆ.
ನೋಟಿಸ್ ಜಾರಿ ಮಾಡಲು ಮನೆ ವಿಳಾಸ ಕೇಳಿಕೊಂಡು ಫೋನ್ ಕರೆ ಬಂದಿತ್ತು. ಈ ವಿಚಾರವನ್ನು ಕ್ರಾಸ್ ಚೆಕ್ ಮಾಡಿ ದೃಢಪಡಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಈ ಕುರಿತು ವಿಚಾರಿಸುವಂತೆ ತಮ್ಮ ಸಹೋದರ, ಸಂಸದ ಡಿ.ಕೆ ಸುರೇಶ್ ಅವರಿಗೆ ಸೂಚಿಸಿದ್ದು, ಅದಾದನಂತರದ ವರ್ತಮಾನ ತಮಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Leave a Comment