ಡಿಕೆಶಿ ತಾಯಿ ಮತ್ತು ಪತ್ನಿಗೆ ಇಡಿ ಸಮನ್ಸ್‌ಗೆ ಕೋರ್ಟ್ ತಡೆ

ನವದೆಹಲಿ, ಅ. ೧೬- ಸಚಿವ ಡಿ.ಕೆ ಶಿವಕುಮಾರ್ ಅವರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿಕೆಶಿ ಅವರ ತಾಯಿ ಗೌರಮ್ಮನವರಿಗೆ ಹಾಗೂ ಪತ್ನಿ ಉಷಾ ಶಿವಕುಮಾರ್ ಅವರಿಗೆ ನೀಡಿದ್ದ ಸಮನ್ಸ್‌ಗೆ ದೆಹಲಿ ಹೈಕೋರ್ಟ್ ತಡೆ ನೀಡಿ ನಾಳೆ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದಿದೆ.
ನಾಳೆ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇಡಿ ಸಮನ್ಸ್‌ಗೆ ತಡೆ ನೀಡಿ, ನಾಳೆ ಗೌರಮ್ಮ ಮತ್ತು ಉಷಾ ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿಲ್ಲ. ಇನ್ನು 7 ದಿನಗಳ ನಂತರ ಇವರಿಬ್ಬರಿಗೆ ಸಮನ್ಸ್ ನೀಡುವಂತೆ ಸೂಚಿಸಿದೆ.
ನ್ಯಾಯಾಲಯದ ಈ ತೀರ್ಮಾನದಿಂದ ಸದ್ಯಕ್ಕೆ ಇಡಿ ವಿಚಾರಣೆಯಿಂದ ಡಿಕೆಶಿ ತಾಯಿ ಹಾಗೂ ಪತ್ನಿ ಪಾರಾಗಿದ್ದಾರೆ.
ಡಿಕೆಶಿ ಅವರ ತಾಯಿಯವರಿಗೆ ಅನಾರೋಗ್ಯವಿದೆ. ಅವರಿಗೆ ದೂರ ಪ್ರಯಾಣ ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ಡಿಕೆಶಿ ತಾಯಿ ಪರ ವಕೀಲರು ವಾದಿಸಿದ್ದರು.
ಈ ವಾದವನ್ನು ಆಲಿಸಿದ ನ್ಯಾಯಾಲಯ ಇಡಿ ಸಮನ್ಸ್‌ಗೆ ತಡೆ ನೀಡಿ ನಾಳಿನ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ.ಇನ್ನು ದಿನದ ನಂತರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿತು.

Leave a Comment