ಡಾ.ಹೆಚ್.ಸಿ.ಮಹಾದೇವಪ್ಪ ಭೇಟಿ

ರಾಯಚೂರು.ಜ.11- ಛಲವಾದಿ ಮಹಾಸಭಾದ ಕನಾ೯ಟಕ ಸಮನ್ವಯ ಸಮತಿಯ ಪದಾಧಿಕಾರಿಗಳಾದ ಡಾ.ಎಚ್. ಸಿ.ಮಹಾದೇವಪ್ಪ ಮಾಜಿ ಸಚಿವರು, ಬಸವರಾಜ ಮಾಜಿ ಅಧ್ಯಕ್ಷರು ಛಲವಾದಿ ಮಹಾಸ‌ಭಾ ಐಎ‌ಎಸ್ ನಿವೃತ್ತ ಅಧಿಕಾರಿ ಸಿದ್ದಯ್ಯ, ಐಎಫ್ಎಸ್ ಅಧಿಕಾರಿ ಡಾ.ರಾಜು ರಾಜ್ಯ ಛಲವಾದಿ ಮಹಾಸಭಾ ಹಾಗೂ ಅಧ್ಯಕ್ಷರಾದ ಎಚ್.ಕುಮಾರ ಅವರು ಜ.9 ರಂದು ನಗರದ ಕನ್ನಡ ಭವನದಲ್ಲಿ ಕರೆದ ಜಿಲ್ಲೆಯ ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಬುದ್ಧ ವಿಹಾರ ಯುವ ವೇದಿಕೆಯ (ರಿ) ವತಿಯಿಂದ ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ಮಾಜಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಛಲುವಾಧಿ ಮಹಾಸಭಾದ ಮಾಜಿ ಅಧ್ಯಕ್ಷರಾದ ಆದೆಪ್ಪ ಕಾಡ್ಲೂರು, ಯುವ ವೇದಿಕೆಯ ಅಧ್ಯಕ್ಷರಾದ ಮಲ್ಲೇಶ್ ಕೊಲಿಮಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಮಂಚಾಲ, ಯುವರಾಜ ವಕೀಲರು, ಮಲ್ಲೇಶ್ ಬೊಮ್ಮನಾಳ, ವಿ.ಆರ್.ಶಾಂತ ಕುಮಾರ, ಚಂದ್ರಶೇಖರ, ಮಲ್ಲೇಶ್ ಕೋಳೂರು, ದೇವೇಂದ್ರ, ಪ್ರಮೋದ್ ಭಂಡಾರಿ, ರವಿ ದಾದಸ್ ಹಾಗೂ ಇತರರು ಭಾಗವಹಿಸಿದ್ದರು.

Leave a Comment