ಡಾ.ಶ್ರೀಪಾದ ಭಟ್ ಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ

 

ಕಲಬುರಗಿ,ಜು.18-ರಂಗ ಸಂಗಮ ಕಲಾ ವೇದಿಕೆ ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವಿಶ್ವೇಶ್ವರಯ್ಯ ಭವನದಲ್ಲಿಂದು ನಡೆಯಿತು.

ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕ ಡಾ.ಶ್ರೀಪಾದ ಭಟ್ ಧಾರೇಶ್ವರ ಅವರಿಗೆ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ಸಾಹಿತಿ ಡಾ.ಸ್ವಾಮಿರಾಮ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡಪಿಯ ನೃತ್ಯ ಮತ್ತು ಯಕ್ಷರಂಗ ತಜ್ಞ ವಿದ್ವಾನ್ ಸುಧೀರ್ ರಾವ್, ಹಿರಿಯ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ್, ಸುಭದ್ರಾಬಾಯಿ ಜಂಗಮಶೆಟ್ಟಿ, ರಂಗ ಸಂಗಮ ಕಲಾವೇದಿಕೆ ಅಧ್ಯಕ್ಷೆ ನಂದಾ ಕೊಲ್ಲೂರ ವೇದಿಕೆ ಮೇಲಿದ್ದರು. ದಿ.ಎಸ್.ಬಿ.ಜಂಗಮಶೆಟ್ಟಿಯವರ ಕುರಿತು ವಾಣಿಜ್ಯ ತೆರಿಗೆಗಳ ನಿವೃತ್ತ ಉಪ ಆಯುಕ್ತ ಹಾಗೂ ರಂಗಕರ್ಮಿ ಎಚ್.ಎಸ್.ಬಸವಪ್ರಭು, ಪ್ರಶಸ್ತಿ ಪುರಸ್ಕೃತರ ಕುರಿತು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿದರು. ರಂಗ ಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿದರು. ಸಿದ್ಧಾರ್ಥ ಡಿ.ಚಿಮ್ಮಾ ಇದ್ಲಾಯಿ ಹಾಗೂ ಸಂಗಡಿಗರಿಂದ ಗೀತ ಗಾಯನ ನಡೆಯಿತು. ಕಲಾ ಆಸಕ್ತರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment