ಡಾ ರಾಜ್ ಎಲ್ಲ ನಟರ ಚಕ್ರವರ್ತಿ: ಅನಿಲ್ ಕಪೂರ್

ಬೆಂಗಳೂರು, ಸೆ 12 – ಡಾ ರಾಜ್ ಕುಮಾರ್ ಈ ಹೆಸರನ್ನು ಕೇಳದವರಿಲ್ಲ, ಯಾರೂ ಮರೆಯುವುದೂ ಇಲ್ಲ ಅವರ ವ್ಯಕ್ತಿತ್ವವೇ ಅಂತಹುದು   ಇವರ ಕುರಿತು ಖ್ಯಾತ ನಟ ಅನಿಲ್ ಕಪೂರ್ ಮಾಧ್ಯಮವೊಂದಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಮೂಲಕ ಅದನ್ನು ಶೇರ್ ಮಾಡಿದ್ದಾರೆ

“ಡಾ ರಾಜ್ ಕುಮಾರ್ ಎಲ್ಲ ನಟರುಗಳ ಚಕ್ರವರ್ತಿಯಿದ್ದಂತೆ ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ  ಕೇವಲ ಚಿತ್ರರಂಗ, ಚಿತ್ರರಸಿಕರು ಮಾತ್ರವಲ್ಲದೆ ಪ್ರತಿಯೊಬ್ಬರೂ ಪ್ರೀತಿಸುವ ವ್ಯಕ್ತಿತ್ವವನ್ನು ಹೊಂದಿದ್ದರು  ಅವರು ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ” ಎಂದು ಅನಿಲ್ ಕಪೂರ್ ಶ್ಲಾಘಿಸಿದ್ದಾರೆ

ಕನ್ನಡ ಚಿತ್ರರಂಗ, ಸಂಗೀತ, ಹಾಗೂ ರಂಗಭೂಮಿಯ ಹಲವು ಮೇರು ಕಲಾವಿದರ ಬಗ್ಗೆಯೂ ಅನಿಲ್ ಕಪೂರ್ ಪ್ರಸ್ತಾಪಿಸಿದ್ದು, ಗಿರೀಶ್ ಕಾರ್ನಾಡ್, ಗಾಯಕ ವಿಜಯಪ್ರಕಾಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

“ನಾನು ವಿಜಯ್ ಪ್ರಕಾಶ್ ಅವರ ಬಹುದೊಡ್ಡ ಅಭಿಮಾನಿ ಯುವರಾಜ್ ಚಿತ್ರದ  ‘ಮನಮೋಹಿನಿ’ ಮತ್ತು ಸ್ಲಮ್‌ಡಾಗ್ ಮಿಲಿಯನೇರ್‌ನ ‘ಜೈ ಹೋ’ ಹಾಡುಗಳು ಅದ್ಭುತವಾಗಿವೆ ಅವರು ಎ ಆರ್ ರಹಮಾನ್ ಅವರ ನೆಚ್ಚಿನ ಗಾಯಕರಲ್ಲಿ ಒಬ್ಬರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ಹೇಳಿದ್ದಾರೆ.

Leave a Comment