ಡಾ.ಬಾಬುಜಗಜೀವನ್ ರಾಂ ಆಧುನಿಕ ಭಾರತದ ಕತೃ-ಡಾ.ಅನಿತಾ

ಮಳವಳ್ಳಿ, ಏ.6- ಹಸಿವು ಮುಕ್ತ ಭಾರತ ನಿರ್ಮಿಸುವಲ್ಲಿ ಡಾ.ಬಾಬುಜಗಜೀವನ್ ರಾಂ ಕೈಗೊಂಡ ಹಸಿರು ಕ್ರಾಂತಿ ಯೋಜನೆ ದೇಶದಲ್ಲೆ ಮಾದರಿಯೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅವರಣದಲ್ಲಿ ತಾಲೂಕು ಆಢಳಿತ,ತಾ.ಪಂ,ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಜಗಜೀವನ್‍ರಾಂರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಶೋಷಿತರ ದ್ವನಿಯಾಗಿ ಸುಮಾರು 46 ವರ್ಷಗಳ ಕಾಲ ಅಧಿಕಾರ ನಡೆಸಿದ ಇಂತಹ ಮಹಾನ್ ನಾಯಕ ಬಾಬುಜಿ ಯವರ ಸೇವೆ ಅಪಾರವೆಂದ ಅವರು ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚದ ಜ್ಞಾನಿಯಾದರೆ ,ಬಾಬುಜಿ ಈ ದೇಶ ಕಂಡ  ವಿದ್ವತ್ ಹೊಂದಿದ ಮಹಾನಾಯಕರಾಗಿದ್ದರು,ಆದರೆ ಇಂದು ಈ ಇಬ್ಬರ ಮಹಾನಾಯಕರ ಒಗ್ಗಟ್ಟನ್ನು ಓಡೆಯುವಂತಹ ಕೆಲಸ ಕೆಲ ಸಂಘಟನೆಗಳು ಮಾಡುತ್ತಿವೆ ಇದಕ್ಕೆ ನನ್ನ ವಿರೋಧವಿದೆ,ಇದನ್ನು ನಾನು ರಾಜರೋಷವಾಗಿ ಖಂಡಿಸುತ್ತೆನೆ ಎಂದರು.ಈ ನಾಯಕರ ಹೆಸರಿನಲ್ಲಿ ಒಗ್ಗಟ್ಟು ಓಡೆಯಲು ಬಿಡುವುದಿಲ್ಲವೆಂದು ಹೇಳಿದರು.
ಪಟ್ಟಣದಲ್ಲಿ ಬಾಬುಜಿ ಭವನ ನಿರ್ಮಿಸುವುದಕ್ಕೆ 1.5 ಕೋಟಿ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ ಜಾಗದ ಗೊಂದಲದಿಂದ ನೆನೆಗುದಿಯಲ್ಲಿದೆ,ತಾವೆಲ್ಲರೂ ಒಮ್ಮತದಿಂದ ಲಿಡ್ಕರ್ ಬಳಿಯಿರುವ ಸರ್ಕಾರದ ಜಾಗದಲ್ಲಿ ಮಾಡಬಹುದು ಎಂದು ಸಹಮತ ಸೂಚಿಸಿದರೆ ಶೀಘ್ರದಲ್ಲೆ ಭವನ ನಿರ್ಮಾಣಕ್ಕೆ ಚಾಲನೆ ನೀಡುತ್ತೆನೆ,ಇದಲ್ಲದೆ ತಾಲೂಕಿನ ಹಲವು ಗ್ರಾಮಗಳಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನ ಪ್ರಾದ್ಯಾಪಕಿ ಡಾ.ಅನಿತಾ ಮಾತನಾಡಿ,ಡಾ.ಬಾಬುಜಗಜೀವನ್ ರಾಂರವರು 46 ವರ್ಷಗಳು ಸಂಸದರಾಗಿ,40 ವರ್ಷ ಸಚಿವರಾಗಿ,ಭಾರತ ದೇಶದ ಉಪ ಪ್ರದಾನಿಗಳಾಗಿ ಸಲ್ಲಿಸಿದ ಸೇವೆ ಆಧುನಿಕ ಬಾರತದ ನಿರ್ಮಾಣಕ್ಕೆ ನಾಂದಿಯೆಂದ ಅವರು ಇವರು ಯುವಕರಿಗೆ,ರಾಜಕಾರಣಿಗಳಿಗೆ,ದಲಿತರಿಗೆ ಅದರ್ಶ ಪ್ರಿಯರಾಗಿದ್ದರೆಂದರು.
ಬಾಬುಜಿ ಹುಟ್ಟು,ರಾಜಕೀಯ,ಸಚಿವರಾಗಿ ಕೈಗೊಂಡ ಕಾರ್ಯಕ್ರಮಗಳು,ಉಳುವವನೆ ಭೂಮಿಯ ಓಡೆಯ ಎಂಬ ಯೋಜನೆ ಶೋಷಿತ ವರ್ಗಕ್ಕೆ ಅವರು ನೀಡಿದ ಕೂಡುಗೆಗಳ ಅಪಾರವೆಂದು ಅವರು ಬಾಬುಜಿ ಕುರಿತು  ವಿಸ್ತಾರವಾಗಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಆಧ್ಯಕ್ಷರಾದ ಬಸವರಾಜು ಮುಖ್ಯ ಅತಿಥಿಯಾಗಿ ಅಗಮಿಸಿ ಮಾತನಾಡಿ ಹಸಿವು ಮುಕ್ತ ಭಾರತ ನಿರ್ಮಿಸಿದ ಬಾಬುಜಿಯವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ,ಅವರ ತತ್ವ ಮತ್ತು ಅದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ದೇಶದ ಪ್ರಗತಿಗೆ ಮುಂದಾಗೋಣವೆಂದರು.
ಕಾರ್ಯಕ್ರಮಕ್ಕೆ ತಾ.ಪಂ ಆಧ್ಯಕ್ಷ ಅರ್.ಎನ್.ವಿಶ್ವಾಸ್ ಚಾಲನೆ ನೀಡಿ ಶುಭ ಕೋರಿದರು.ತಹಶೀಲ್ದಾರ್ ಹೆಚ್.ಎಸ್.ದಿನೇಶ್‍ಚಂದ್ರ ಡಾ.ಬಾಬುಜಗಜೀವನ್ ರಾಂ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಆಧ್ಯಕ್ಷ ಬಸವರಾಜು ಪಲಾನುಭವಿಗೆ ಕಾರಿನ ಕೀ ವಿತರಿಸಿದರು.ತಾಲೂಕು ಆಢಳಿತ ಮತ್ತು ಬ್ಲಾಕ್ ಕಾಂಗ್ರೇಸ್ ಸಮಿತಿ ಬಸವರಾಜುರವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮ್ಕಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಅಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಂ ಭಾವ ಚಿತ್ರ ಮೆರವಣಿಗೆಗೆ ಪುರಸಭೆ ಆಧ್ಯಕ್ಷ ರಿಯಾಜಿನ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ವಿರೋಧ ಪಕ್ಷದ ನಾಯಕ ಹನುಮಂತು,ಸುಷ್ಮರಾಜು,ಎಪಿಎಂಸಿ.ಆಧ್ಯಕ್ಷ ಅಂಬರೀಷ್,ತಾ.ಪಂ.ಉಪಾಧ್ಯಕ್ಷ ಮಾದು,ಟಿಎಪಿಸಿಎಂಎಸ್ ನಿರ್ದೇಶಕ ಸುಂದ್ರಪ್ಪ,ದೇವರಾಜು,ಪಿಎಲ್ ಡಿ ಬ್ಯಾಂಕ್ ಆಧ್ಯಕ್ಷ ವೆಂಕಟರಾಜು,ಪುರಸಭೆ ಮಾಜಿ ಆಧ್ಯಕ್ಷ ಎಸ್.ಸರೋಜಮ್ಮ,ಪುರಸಭೆ ಸದಸ್ಯರು,ತಾ.ಪಂ.ಜಿ.ಪಂ.ಸದಸ್ಯರುಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪುರಸಭೆ ವಿರುದ್ದ ಅಭಿಮಾನಿಗಳ ಅಕ್ರೋಶ:ಇಂತಹ ಮಹಾನಾಯಕರ ಜಯಂತಿ ಮೆರವಣಿಗೆಗೆ ಪ್ರತಿ ಬಾರಿ ಪುರಸಭೆವತಿಯಿಂದ ವಾಹನ ನೀಡುವುದು ಸೇರಿದಂತೆ ಅಗತ್ಯ ಸೇವೆ ನೀಡುವ ಕೆಲಸ ಮಾಡುತ್ತಿದ್ದ ಪುರಸಭೆ ಬಾಬುಜಿ ಜಯಂತಿಯಲ್ಲಿ ಸರಿಯಾಗಿ ಸ್ಪಂದಿಸಿಲ್ಲವೆಂದು ಅರೋಪಿಸಿ ಡಾ.ಜಗಜೀವನ್ ರಾಂ ಅಭಿಮಾನಿಗಳು ಪುರಸಭೆ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ಗೊಂದಲವುಂಟಾಗಿ ನಂತರ ಸಮಸ್ಯೆ ಬಗೆಹರಿಸಲಾಯಿತು.
ಇದಲ್ಲದೆ ತಾಲೂಕಿನಾದ್ಯಂತ ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ಡಾ.ಬಾಬುಜಗಜೀವನ್ ರಾಂ ಜನ್ಮ ದಿನಾಚರಣೆಯನ್ನು ಶ್ರದ್ದೆಯಿಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮೆರವಣಿಗೆ ನಡೆಸಿ,ಸಿಹಿ ಹಂಚುವ ಮೂಲಕ ಸಡಗರ-ಸಂಭ್ರಮದಿಂದ ಬುದವಾರ ಆಚರಿಸಲಾಯಿತು.ಇದಲ್ಲದೆ ಡಾ.ಬಾಬುಜಿ ಅಭಿಮಾನಿಗಳಿಂದ ಏ.7 ರಿಂದ ಏ.8 ರವರೆಗೆ ಕ್ರಿಕೇಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದಾರೆ.

Leave a Comment