ಡಾ.ಕೆ.ಸುಧಾಕರ್ ಗೆ ಸಿದ್ದು ಟಾಂಗ್

ಶಿವಮೊಗ್ಗ : ಸಮ್ಮಿಶ್ರ ಸರ್ಕಾರ ನನ್ನಿಂದ ಬಿದ್ದಿಲ್ಲ, ರಾಜೀನಾಮೆ ನೀಡಿದ್ದು ಸಿದ್ದರಾಮಯ್ಯನಾ ಅಥವಾ 17 ಶಾಸಕರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇಂದು ಮಾತನಾಡಿದ್ದ ಡಾ.ಕೆ.ಸುಧಾಕರ್ ಅವರು ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈತ್ರಿ ಸರ್ಕಾರ ಬೀಳಲು ರಾಜೀನಾಮೆ ನೀಡಿದ್ದು ಸಿದ್ದರಾಮಯ್ಯನಾ ಅಥವಾ 17 ಶಾಸಕರಾ ಎಂದು ಪ್ರಶ್ನಿಸಿದರು. ಅಲ್ಲದೇ, ರಾಜೀನಾಮೆ ನೀಡಿ ಎಂದು ಹೇಳಿದರೆ ರಾಜೀನಾಮೆ ಕೊಡಲು ಇವರೇನು ಸಣ್ಣ ಮಕ್ಕಳಾ ಅಥವಾ ಹಾಲು ಕುಡಿಯುವ ಮಕ್ಕಳಾ ಎಂದು ಪ್ರಶ್ನಿಸಿದರು. ಇದೇ ವೇಳೆ, ನಾನು ರಾಜೀನಾಮೆ ನೀಡಿ ಎಂದರೆ ಅದನ್ನು ಕೊಡಲು ಇವರೇನು ಕಡಲೇಪುರಿ ತಿನ್ನುತ್ತಿದ್ದಾರಾ ಎಂದು ಪ್ರಶ್ನಿಸಿದರು. ಅಲ್ಲದೇ, ಮೈತ್ರಿ ಸರ್ಕಾರ ಬಿದ್ದಿದ್ದರಲ್ಲಿ ನನ್ನದೇನು ಕೈವಾಡವಿಲ್ಲ ಎಂದು ತಿರುಗೇಟು ನೀಡಿದರು…

Leave a Comment