ಡಾ.ಕಮಲಾಪುರ ಸಂವಾದಒಂದು ರಾಷ್ಟ್ರ ಒಂದು ಚುನಾವಣೆ

ಕಲಬುರಗಿ ಮಾ13: ಒಂದು ರಾಷ್ಟ್ರಕ್ಕೆ ಒಂದೇ ಸಲ ಚುನಾವಣೆ ನಡೆಸುವ ಅಗತ್ಯ ಕುರಿತಂತೆ ನೇತ್ರ ತಜ್ಞ ಡಾ ಪ್ರಶಾಂತ ಕಮಲಾಪುರ ಅವರು ಇಂದು ನಗರದ ಪತ್ರಿಕಾ ಭವನದಲ್ಲಿ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಪ್ರತಿಪಾದಿಸಿದರು.

ಏಕಕಾಲಕ್ಕೆ ಚುನಾವಣೆ ನಡೆಯುವದರಿಂದ ಸಮಯ, ಹಣ, ಮಾನವ ಶಕ್ತಿ ಉಳಿತಾಯವಾಗುವದಲ್ಲದೇ, ಸರಕಾರದ ಯಂತ್ರ ಚುರುಕುಗೊಳ್ಳುವದು ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಆಯೋಗವು ಚುನಾವಣೆ ನಡೆಸಲು 3870 ಕೋಟಿ ರೂ ಖರ್ಚು ಮಾಡಿತ್ತು. ಇದಲ್ಲದೇ ಎಲ್ಲ ಪಕ್ಷಗಳು ಸುಮಾರು 30 ಸಾವಿರ ಕೋಟಿ ರೂ ಖರ್ಚು ಮಾಡಿದ್ದವು. ಚುನಾವಣೆ ಭದ್ರತೆಗೆ ಸೇನೆಯ ಬಳಕೆ ತುಂಬಾ ಸೂಕ್ಷ್ಮ ವಿಷಯವಾಗಿದ್ದು, ಸಾಕಷ್ಟು ವೆಚ್ಚದಾಯಕವೂ ಆಗಿದೆ.ಪದೇ ಪದೇ ಚುನಾವಣೆ ನಡೆಯುವದರಿಂದ ಮತದಾರರ ಪಟ್ಟಿ ಮತ್ತೆ ಮತ್ತೆ ಪರಿಷೃತಗೊಳ್ಳುವ ಕಾರ್ಯ ನಡೆಸಬೇಕಾಗುವದು, ಚುನಾವಣೆ ಕಾರ್ಯಕ್ಕೆ  ಶಾಲಾ ಶಿಕ್ಷಕರ ಬಳಕೆಯಿಂದ ಶಿಕ್ಷಣ ವ್ಯವಸ್ಥೆಗೆ ಪೆಟ್ಟು ಬೀಳಲಿದೆ  ಚುನಾವಣೆ ಸಂದರ್ಭದಲ್ಲಿ ನಡೆಯುವ ಕೋಮುಗಲಭೆಗಳು ದೇಶದ ಸಮಗ್ರತೆಗೆ ಧಕ್ಕೆ ತರುವವು ಎಂದರು.

356 ಆರ್ಟಿಕಲ್ ದುರ್ಬಳಕೆ, ಅವಿಶ್ವಾಸ ಗೊತ್ತುವಳಿಯ ಮೂಲಕ ಆಡಳಿತ ಸರಕಾರಗಳ ಪತನದಿಂದ ಮತ್ತೆ ಮತೆ ಚುನಾವಣೆ ಎದುರಿಸುವಂತಾಗುವದು ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಗೆ  ತಡೆಯಾಗಿವೆ. ಆದ್ದರಿಂದ ಒಂದು ಆಡಳಿತರೂಢ ಸರಕಾರ ಎರಡು ವರ್ಷದ ನಂತರ ಅವಿಶ್ವಾಸ ಗೊತ್ತುವಳಿಯ ಬಳಿಕ ಬಿದ್ದುಹೋದರೆ ಉಳಿದ ಅವಧಿಗೆ ಮಾತ್ರ ಚುನಾವಣೆ ನಡೆಸುವಂತಾಗಬೇಕು.ಇದು1951 ರಿಂದ 1967 ರವರೆಗೆ ದೇಶದಲ್ಲಿ ಜಾರಿಯಲ್ಲಿತ್ತು ಎಂದರು.

ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಧಕ್ಕೆಯಾಗುವದು , ಸರ್ವಾಧಿಕಾರ ತಲೆ ಎತ್ತುವದು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಹೊಡೆತ ಬೀಳುವದಿಲ್ಲವೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ.ಹೊಸ ವ್ಯವಸ್ಥೆಯನ್ನು ಅಳವಡಿಸುವಾಗ ಕೆಲವು ಹಿಂಜರಿಕೆ ಇರುವದು ಸಹಜ. ಜನ ಈಗ ಸಾಕಷ್ಟು ಪ್ರಬುದ್ಧರಾಗಿದ್ದಾರೆ.ತಮಗೆ ಬೇಕಾದ ಪಕ್ಷವನ್ನು ಚುನಾಯಿಸಲು ಅವರು ಸಮರ್ಥರಾಗಿದ್ದಾರೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಶೇ 27 ಪ್ರಮಾಣದಲ್ಲಿ ಮತ ಪಡೆದವು ಎಂದರು.

À ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಭವಾನಿಸಿಂಗ್ ಸ್ವಾಗತಿಸಿದರು. ಅನೇಕ ಹಿರಿಯ ಪತ್ರಕರ್ತರು ಪಾಲ್ಗೊಂಡರು

Leave a Comment