ಡಾ ಉಮೇಶ ಜಾಧವ ಸನ್ಮಾನ 22 ರಂದು

( ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜು 11: ಬಂಜಾರಾ ಸಮಾಜ ಮತ್ತು ಬಂಜಾರಾ ಸರಕಾರಿ ಅರೆ ಸರಕಾರಿ ನೌಕರರ ಸಂಘ ಮತ್ತು ಬಂಜಾರಾ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಚಿಂಚೋಳಿ ಶಾಸಕ ಡಾ ಉಮೇಶ ಜಾಧವ ಸನ್ಮಾನ ಸಮಾರಂಭ ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ನಡೆಯಲಿದೆ ಎಂದು ತಾರಾನಾಥ ಚವ್ಹಾಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರಂಭದಲ್ಲಿ ಬಂಜಾರಾ ಸಮಾಜದ ಬದುಕುಭವಿಷ್ಯ ಕುರಿತು ವಿಚಾರ  ಸಂಕಿರಣ ಏರ್ಪಡಿಸಲಾಗಿದೆ .ಬಂಜಾರಾ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಮಾಜದ ಯುವ ಪೀಳಿಗೆಗೆ ಉತ್ತಮ ಸಲಹೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ  ಬಿ ಎನ್ ಚವ್ಹಾಣ,ಸುರೇಶ ಜಾಧವ,ರಾಮಚಂದ್ರ ಜಾಧವ ಸೇರಿದಂತೆ ಹಲವರಿದ್ದರು

Leave a Comment