ಡಾ. ಅಂಬೇಡ್ಕರ ಜಯಂತೋತ್ಸವ: ಕುಸ್ತಿ ಪಂದ್ಯಾವಳಿ

ಕಲಬುರಗಿ, ಮಾ. 19: ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ ಅವರ 126ನೇ ಜಯಂತೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವಿಶಾಲ ನವರಂಗ, ಗೌರವಾಧ್ಯಕ್ಷ ಎಸ್.ಎಸ್. ತವಡೆ ಜಂಟಿಯಾಗಿ ತಿಳಿಸಿದರು.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ. 22 ರಿಂದ ಎ. 12 ವರೆಗೆ ಎಂ.ಎಸ್.ಕೆ.ಮಿಲ್ ಮೈದಾನದಲ್ಲಿ ಕ್ರಿಕೇಟ್ ಪಂದ್ಯಾವಳಿ, ಎ. 6 ರಂದು ರಾಜಾಪುರ ಗ್ರೌಂಡ್‍ದಲ್ಲಿ ಹಗ್ಗ ಜಗ್ಗಾಟ ಪಂದ್ಯ, ಎ. 7 ರಿಂದ 9ರವರೆಗೆ ಸುಂದರ ನಗರದಲ್ಲಿ ಹೊನಲು ಬೆಳಕಿನಲ್ಲಿ ಕಬ್ಬಡಿ ಮತ್ತು ವಾಲಿಬಾಲ್ ಪಂದ್ಯಾವಳಿ, ಎ. 9 ರಂದು ಕುಸನೂರ ತಾಂಡಾ ಹತ್ತಿರದ ಜಿಡಿಎ ಕಾಲೋನಿಯಲ್ಲಿ ದ್ವೀಚಕ್ರ ಮೋಟಾರ್ ಬೈಕ್ ಪಂದ್ಯಾವಳಿ, ಎ. 10 ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸಾರ್ವಜನಿಕ ಉದ್ಯಾನವನದ ಟೌನ್‍ಹಾಲ್ ಆವರಣದಲ್ಲಿ ಎ. 11 ರಂದು ಮಕ್ಕಳಿಗಾಗಿ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮತ್ತು ದಲಿತ ಸಾಹಿತ್ಯ ಸಮ್ಮೇಳನವು ಸರದಾರ ವಲ್ಲಭ ಭಾಯಿ ಪಟೇಲ ವೃತ್ತದ ಹತ್ತಿರ ಕನ್ನಡ ಭವನದಲ್ಲಿ, 11 ರಂದು ಹಣ್ಣು ಮಕ್ಕಳಿಗಾಗಿ ತಾರಫೈಲ್, ವಿದ್ಯಾನಗರದಲ್ಲಿ ಖರ್ಚಿ ಸ್ಪರ್ಧೆ, ಎ. 11 ರಂದು 2ನೇ ದುಂಡು ಮೇಜಿನ ಪರಿಷತ್ತ ನಾಟಕ ಪ್ರದರ್ಶನ ಹಾಗೂ ದೇಹ ದಾಢ್ರ್ಯಾ ಪಂದ್ಯ, ಎ. 12 ರಂದು ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ ಅವರ ಕುರಿತು ಜಾನಪದ ಮತ್ತು ಭಜನೆ ಪಂದ್ಯಾವಳಿ ಜಗತ್ತ ವೃತ್ತದ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಯ ಆವರಣ, 13 ರಂದು ಜಾನಪದ ಮತ್ತು ನೃತ್ಯ ಸ್ಪರ್ಧೆಗಳು, ಜಗತ್ತ ವೃತ್ತದ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಯ ಆವರಣ, 14 ರಂದು ಕೇಂದ್ರ ಬಸ್ ನಿಲ್ದಾಣದಿಂದ ಜಗತ್ತ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 7 ಗಂಟೆಗೆ ವೃತ್ತದ ಹತ್ತಿರದಲ್ಲಿ ಗಣ್ಯರಿಂದ ಭಾಷಣ ಹಾಗೂ ಭೀಮಗೀತೆ ಮತ್ತು ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಧ್ಯಕ್ಷ ಅವಿನಾಶ ಗಾಯಕವಾಡ, ಉಪಾಧ್ಯಕ್ಷ ಸತೀಶ ಫರತಾಬಾದ, ಜಂಟಿ ಉಪಾಧ್ಯಕ್ಷ ಸಿದ್ಧಾರ್ಥ ಕೋರವಾರ, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಜಾಲವಾದ್, ಖಜಾಂಚಿ ವಿನೋದ ಬೊಮ್ಮಾ, ಜಂಟಿ ಕಾರ್ಯದರ್ಶಿ ರಾಕೇಶ ಕೊಳ್ಳೂರ, ಸಹ ಕಾರ್ಯದರ್ಶಿ ರಾಜಕುಮಾರ ಧರ್ಗಿ, ಪ್ರಚಾರ ಸಮಿತಿ ಅಧ್ಯಕ್ಷ ಸಂಜಯಕುಮಾರ ಹಾಗೂ ಇತರರು ಇದ್ದರು.

Leave a Comment