ಡಾಲಱ್ಸ್ ಕಾಲೋನಿ: ಶೆಡ್‌ ತೆರವಿಗೆ ಡಿಸಿ ಆದೇಶ

ರಾಯಚೂರು.ಸೆ.04- ಡಾಲಱ್ಸ್ ಕಾಲೋನಿಯ ಪ್ಲಾಟ್ ನಂ.16ರಲ್ಲಿ ರಾಚಯ್ಯಪ್ಪ ಎಂಬುವವರು ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸುವ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ ತಾತ್ಕಾಲಿಕ ಶೆಡ್‌ ನಿರ್ಮಿಸಿದ್ದು, ತೆರವುಗೊಳಿಸದಿರುವ ಕಾರಣ, ನಿವಾಸಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆಂದು ಶಾಂತಿ ಕಾಲೋನಿ ನಿವಾಸಿಗಳು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ದೂರು ನೀಡಿದರು.
ಅವರಿಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ನಿವಾಸಿಗಳು ದೂರು ನೀಡಿದರು. ಪ್ಲಾಟ್ ನಂ. 16 ರಲ್ಲಿ ರಾಚಯ್ಯಪ್ಪ ಎಂಬುವವರು ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಶೆಡ್ ಹಾಕಲಾಗಿದ್ದು, ಎರಡು ಬಾರಿ ನಗರಸಭೆಯಿಂದ ತೆರವುಗೊಳಿಸಿದರೂ ಪುನಃ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದಾರೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಅವರು ನಗರಸಭೆ ಅಧಿಕಾರಿಗೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಿದರು.
ಜಿಲ್ಲಾಧ್ಯಕ್ಷ ನೇಗಿಲಯೋಗಿ ಪ್ರಗತಿ ಪರ ಒಕ್ಕೂಟಾಧ್ಯಕ್ಷ ಶಿವಕುಮಾರ್ ಪಾಟೀಲ್ ಅವರು 9 ಎ ಕಾಲುವೆ ಹಣಗಿ ಭಾಗದ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭೂಪೇಂದ್ರ ಅವರು ತಮ್ಮ ಮನೆಯ ಕಾಂಪೌಂಡ್‌ಗೆ ಪೆಟ್ರೋಲ್ ಬಂಕ್ ಹೊಂದಿಕೊಂಡಿದ್ದರಿಂದ ಪೆಟ್ರೋಲ್ ಬಂಕ್‌ನಿಂದ ಕೌಂಪಾಂಡ್‌ಗೆ ಹಾನಿಯಾಗುತ್ತಿದೆ ಆದ್ದರಿಂದ ಸ್ಟೇಷನ್ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ತೆರವುಗೊಳಿಸಬೇಕೆಂದು ಮನವಿ ಮಾಡಿದರು. ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರು ಸ್ಥಳ ಪರಿಶೀಲಿಸುವುದಾಗಿ ತಿಳಿಸಿದರು. ಜಿ.ಕಿಶನ್‌ರಾವ್ ತಮ್ಮ ದೂರಿನಲ್ಲಿ ನಿವೃತ್ತ ಕಂದಾಯ ನಿರೀಕ್ಷಕರು ನೀರಾವರಿ ಇಲಾಖೆಯಲ್ಲಿ ನಿವೃತ್ತಿ ಹೊಂದಿದ್ದರೂ ನನ್ನ ನಿವೃತ್ತಿ ಉಪದಾನ ತಡೆಹಿಡಿಯಲಾಗಿದ್ದು ಶೀಘ್ರ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುಬೇಕೆಂದು ತಿಳಿಸಿದರು.
ಕಳೆದ 1 ವರ್ಷದ ಹಿಂದೆ ಕಿಶನ್‌ರಾವ್ ಅವರಿಗೆ ನಿವೃತ್ತಿ ಉಪದಾನ ನೀಡಲು ಸೂಚಿಸಿದ್ದರು. ಅಧಿಕಾರಿಗಳು ಸ್ಪಂಧಿಸದಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಸಿಇಓ ನಳೀನ್ ಅತುಲ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಆರ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Leave a Comment