ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಏರಿಕೆ

ಮುಂಬೈ, ಜೂ 12 – ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನ ಸಂದರ್ಭದಲ್ಲಿ  ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಚೇತರಿಕೆ ಕಂಡು 69.38ರಷ್ಟು ಮೌಲ್ಯ ದಾಖಲಿಸಿದೆ.

ಬ್ಯಾಂಕರ್‌ಗಳು, ರಫ್ತುದಾರರು ಮತ್ತು ಡೀಲರ್‌ಗಳು ಇಂದು ಡಾಲರ್ ಮಾರಾಟ ಮಾಡುವ ಮೂಲಕ ವಹಿವಾಟು ಆರಂಭಿಸಿದರು.

ವಿಶ್ವದ ಇತರ ಕರೆನ್ಸಿಗಳ ಎದುರು ಡಾಲರ್ ದುರ್ಬಲಗೊಂಡ ಕಾರಣ ದೇಶೀಯ ಘಟಕ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡುಬಂತು. ಆದಾಗ್ಯೂ, ಷೇರು ಮಾರುಕಟ್ಟೆಯಲ್ಲಿ ಋಣಾತ್ಮಕ ಆರಂಭವು ಪ್ರಾರಂಭವಾಯಿತು ಎಂದು ವಿತರಕರು ತಿಳಿಸಿದರು.

ದಿನದ ವಹಿವಾಟಿನಲ್ಲಿ ಏರಿಳಿತವು ಕಂಡುಬಂದಿದ್ದು, ರೂಪಾಯಿ ಮೌಲ್ಯ ಗರಿಷ್ಠ ಮತ್ತು ಕಡಿಮೆ , ಕ್ರಮವಾಗಿ 69.45 ಮತ್ತು 69.35 ರಷ್ಟು ದಾಖಲಾಯಿತು.

 

Leave a Comment